ADVERTISEMENT

ಮುಂಬೈ ದಾಳಿ ಕರಾಳ ನೆನಪು ಅಚ್ಚಳಿಯದೆ ಉಳಿದಿದೆ: ಅಮೆರಿಕ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 14:33 IST
Last Updated 7 ಫೆಬ್ರುವರಿ 2023, 14:33 IST
.
.   

ವಾಷಿಂಗ್ಟನ್‌ (ಪಿಟಿಐ): 2008ರ ಮುಂಬೈ ಉಗ್ರ ದಾಳಿಯ ಕರಾಳ ನೆನಪು ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲೂ ಇನ್ನೂ ಅಚ್ಚಳಿಯದೆ ಉಳಿದಿದೆ ಎಂದು ಬೈಡನ್ ಆಡಳಿತ ಸೋಮವಾರ ಹೇಳಿದೆ.

‘ಹೋಟೆಲ್‌ ಮೇಲಿನ ದಾಳಿ, ರಕ್ತಪಾತದ ಕರಾಳ ನೆನಪುಗಳು ಇನ್ನೂ ಹಾಗೇ ಇವೆ. ಇದೇ ಕಾರಣಕ್ಕಾಗಿ ಆ ದಿನ ಹಲವು ಅಮಾಯಕ ಜೀವಗಳನ್ನು ಬಲಿಪಡೆದ ಇಡೀ ಭಯೋತ್ಪಾದಕ ಗುಂಪು ಸದೆಬಡಿಯಲು ಪಣತೊಟ್ಟಿದ್ದೇವೆ’ ಎಂದು ಅದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದೆ.

ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ವಿದೇಶಿ ಪ್ರಜೆಗಳು ಸೇರಿ 166 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.