ADVERTISEMENT

ಮೆಕ್ಸಿಕೊ: ಫುಟ್‌ಬಾಲ್‌ ಮೈದಾನದಲ್ಲಿ ಗುಂಡಿನ ದಾಳಿ; 11 ಬಲಿ

ಏಜೆನ್ಸೀಸ್
Published 26 ಜನವರಿ 2026, 15:59 IST
Last Updated 26 ಜನವರಿ 2026, 15:59 IST
<div class="paragraphs"><p>ಮೆಕ್ಸಿಕೊದ ಸಲ್‌ಮಂಕಾ ಪಟ್ಟಣದ ಫುಟ್‌ಬಾಲ್‌ ಮೈದನದಲ್ಲಿ ಗುಂಡಿನ ದಾಳಿ ನಡೆದ ಜಾಗವನ್ನು ಸುತ್ತುವರಿದ ಯೋಧರು&nbsp;</p></div>

ಮೆಕ್ಸಿಕೊದ ಸಲ್‌ಮಂಕಾ ಪಟ್ಟಣದ ಫುಟ್‌ಬಾಲ್‌ ಮೈದನದಲ್ಲಿ ಗುಂಡಿನ ದಾಳಿ ನಡೆದ ಜಾಗವನ್ನು ಸುತ್ತುವರಿದ ಯೋಧರು 

   

ಮೆಕ್ಸಿಕೊ ಸಿಟಿ: ಇಲ್ಲಿನ ಫುಟ್‌ಬಾಲ್‌ ಮೈದಾನದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ 11 ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

‘ಫುಟ್‌ಬಾಲ್‌ ಪಂದ್ಯ ಕೊನೆಗೊಳ್ಳುವ ಸಂದರ್ಭದಲ್ಲಿ ಬಂದೂಕುಧಾರಿ ಒಳಗೆ ನುಗ್ಗಿ ದಾಳಿ ನಡೆಸಿದ್ದಾನೆ’ ಎಂದು ಇಲ್ಲಿನ ಸಲ್‌ಮಂಕಾ ಮೇಯರ್ ಸೀಸರ್‌ ಪ್ರಿಯಿಟೊ ತಿಳಿಸಿದ್ದಾರೆ. 

ADVERTISEMENT

ಘಟನೆಯಲ್ಲಿ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಾಯಗೊಂಡವರಲ್ಲಿ ಮಹಿಳೆ ಹಾಗೂ ಅಪ್ರಾಪ್ತ ವಯಸ್ಸಿನ ವ್ಯಕ್ತಿಯೊಬ್ಬರು ಸೇರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.