ADVERTISEMENT

ಮೆಕ್ಸಿಕೊ: 45 ಚೀಲಗಳಲ್ಲಿ ಮಾನವ ಅಂಗಾಂಗ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 12:41 IST
Last Updated 2 ಜೂನ್ 2023, 12:41 IST
   

ಮೆಕ್ಸಿಕೊ ಸಿಟಿ: ಕಳೆದ ವಾರ ನಾಪತ್ತೆಯಾದ ಎಂಟು ಮಂದಿಗೆ ಹುಟುಕಾಟ ಆರಂಭಿಸಿದಾಗ ಮನುಷ್ಯರ ಶವಗಳ ಅವಶೇಷ ತುಂಬಿದ್ದ 45 ಚೀಲಗಳು ಪಶ್ಚಿಮ ಮೆಕ್ಸಿಕನ್‌ನ ಜಾಲಿಸ್ಕೊದ ಕಮರಿಯಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಪುರುಷರು ಮತ್ತು ಮಹಿಳೆಯರ ಅವಶೇಷಗಳು ಚೀಲದಲ್ಲಿರುವುದು ಕಂಡುಬಂದಿದೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಅವರ ಕಚೇರಿಯು ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬೃಹತ್ ಕೈಗಾರಿಕಾ ಕೇಂದ್ರ ಗುಡಾಲಜರದ ಉಪನಗರ ಜಾಪೊಪನ್ ನಗರದಲ್ಲಿ 40 ಮೀಟರ್ ಆಳದ ಕಮರಿಯಲ್ಲಿ ಮಂಗಳವಾರ ಈ ಚೀಲಗಳನ್ನು ಪತ್ತೆ ಮಾಡಲಾಗಿದೆ. ಮೃತರ ಸಂಖ್ಯೆ ಅಥವಾ ಅವರ ಗುರುತು ಪತ್ತೆಗೆ ವಿಧಿವಿಜ್ಞಾನ ತಜ್ಞರು ಈವರೆಗೆ ನಿರ್ಧರಿಸಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಮೇ 20ರಿಂದ ಸುಮಾರು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು ಆರು ಮಂದಿ ಪುರುಷರು ನಾಪತ್ತೆಯಾಗಿದ್ದು, ಇವರಿಗಾಗಿ ಶೋಧ ನಡೆಸಲಾಗುತ್ತಿದೆ. ಬೇರೆ ಬೇರೆ ದಿನಗಳಲ್ಲಿ ಕಾಣೆಯಾದ ಇವರೆಲ್ಲ ಒಂದೇ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.