ADVERTISEMENT

Covid-19 World Update: ಮೆಕ್ಸಿಕೊದಲ್ಲಿ ಮೃತರ ಸಂಖ್ಯೆ 3.21 ಲಕ್ಷ!

ಏಜೆನ್ಸೀಸ್
Published 28 ಮಾರ್ಚ್ 2021, 6:47 IST
Last Updated 28 ಮಾರ್ಚ್ 2021, 6:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಕ್ಸಿಕೊ ಸಿಟಿ: ‘ದೇಶದಲ್ಲಿ ಕೋವಿಡ್‌ನಿಂದಾಗಿ ಒಟ್ಟು 3.21 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಮೆಕ್ಸಿಕೊ ಸರ್ಕಾರ ಶನಿವಾರ ಖಚಿತಪಡಿಸಿದೆ. ಇದು ಅಧಿಕೃತ–ಪರೀಕ್ಷೆಯು ದೃಢೀಕರಿಸಿದ ಸಾವಿಗಿಂತ ಶೇಕಡ 60 ರಷ್ಟು ಹೆಚ್ಚಿದೆ’ ಎಂದು ಸರ್ಕಾರ ತಿಳಿಸಿದೆ.

‘2,01,429 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ–ಪರೀಕ್ಷೆ ದೃಢೀಕರಿಸಿದೆ. ಆದರೆ ಮೆಕ್ಸಿಕೊದ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಹಾಗಾಗಿ ಮೆಕ್ಸಿಕೊದಲ್ಲಿ ಕಡಿಮೆ ಕೋವಿಡ್‌ ಪರೀಕ್ಷೆಗಳು ನಡೆಸಲಾಗಿದೆ. 2,01,429 ಮಂದಿಯನ್ನು ಹೊರತುಪಡಿಸಿ ಹಲವಾರು ಜನರು ಪರೀಕ್ಷೆಗೆ ಒಳಗಾಗದೇ ಮನೆಯಲ್ಲೇ ಸಾವಿಗೀಡಾಗಿದ್ದಾರೆ. ‘ಹೆಚ್ಚುವರಿ ಸಾವು’ ಮತ್ತು ‘ಮರಣ ಪತ್ರ’ಗಳ ಸರಿಯಾದ ಪರಿಶೀಲನೆಯಿಂದ ಮಾತ್ರ ಒಟ್ಟು ಸಾವಿನ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬಹುದು’ ಎಂದು ಸರ್ಕಾರ ಹೇಳಿದೆ.

ಕೊರೊನಾ ಪಿಡುಗು ಆರಂಭಗೊಂಡ ದಿನದಿಂದ ಫೆಬ್ರುವರಿ 14ರ ತನಕ ಒಟ್ಟು 2,94,287 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಫೆಬ್ರುವರಿ 15ರ ಬಳಿಕ ಹೆಚ್ಚುವರಿಯಾಗಿ 26,772 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಪರೀಕ್ಷೆ ದೃಢೀಕರಿಸಿದೆ ಎಂಬ ವರದಿಯನ್ನು ಸರ್ಕಾರಶನಿವಾರ ಪ್ರಕಟಿಸಿದೆ.

ADVERTISEMENT

ಅಮೆರಿಕದಲ್ಲಿ ಅತಿ ಹೆಚ್ಚು ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಸಾವಿಗೀಡಾದವರ ಸಂಖ್ಯೆಯಲ್ಲಿ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ. ಆದರೆ ಈ ರಾಷ್ಟ್ರಗಳಿಗೆ ಹೋಲಿಸಿದರೆ ಮೆಕ್ಸಿಕೊ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಮೆಕ್ಸಿಕೊದ ಒಟ್ಟು ಜನಸಂಖ್ಯೆ 12.6 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.