ADVERTISEMENT

ಭಾರತ-ಚೀನಾ ಗಡಿಯಲ್ಲಿ ಸೈನ್ಯ ವಿಸ್ತರಣೆಯು ಸಂಘರ್ಷದ ಅಪಾಯ ಹೆಚ್ಚಿಸುತ್ತದೆ: ಅಮೆರಿಕ

ಏಜೆನ್ಸೀಸ್
Published 9 ಮಾರ್ಚ್ 2023, 5:15 IST
Last Updated 9 ಮಾರ್ಚ್ 2023, 5:15 IST
   

ವಾಷಿಂಗ್ಟನ್‌: ವಿವಾದಿತ ಗಡಿಯಲ್ಲಿ ಭಾರತ ಮತ್ತು ಚೀನಾ ಎರಡೂ ದೇಶಗಳು ಸೈನ್ಯವನ್ನು ಬಲಪಡಿಸಿದ್ದು, ಈ ಹೆಜ್ಜೆ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಸಂಘರ್ಷದ ಅಪಾಯವನ್ನು ಹೆಚ್ಚಿಸಲಿದೆ ಎಂದು ಅಮೆರಿಕ ಗುಪ್ತಚರ ವರದಿ ಹೇಳಿದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಮತ್ತು ಚೀನಾ ನಡುವಿನ ಘರ್ಷಣೆಗಳು ತ್ವರಿತವಾಗಿ ಉಲ್ಬಣಗೊಳ್ಳುತ್ತವೆ ಎಂಬುದಕ್ಕೆ ಈ ಹಿಂದಿನ ಸಂಘರ್ಷಗಳೇ ಸಾಕ್ಷಿ ಎಂದು ಅಮೆರಿಕ ಗುಪ್ತಚರ ವಾರ್ಷಿಕ ವರದಿ ತಿಳಿಸಿದೆ.

ವಿವಾದಿತ ಗಡಿಯಲ್ಲಿ ಭಾರತ ಮತ್ತು ಚೀನಾ ಎರಡೂ ದೇಶಗಳು ಸೈನ್ಯವನ್ನು ಬಲಪಡಿಸಿದ್ದು ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಸಂಘರ್ಷದ ಅಪಾಯವನ್ನು ಹೆಚ್ಚಿಸಲಿದೆ. ಇದು ಅಮೆರಿಕದ ಹಿತಾಸಕ್ತಿಗಳಿಗೆ ನೇರ ಬೆದರಿಕೆ ಹೊಂದಿರುತ್ತದೆ ಮತ್ತು ಅಮೆರಿಕ ಮಧ್ಯಸ್ಥಿಕೆಗೆ ಕರೆ ನೀಡುತ್ತದೆ ಎಂದು ವರದಿ ಹೇಳಿದೆ.

ADVERTISEMENT

ದಶಕದಲ್ಲಿಯೇ ಅತ್ಯಂತ ಗಂಭೀರವಾದ 2020ರಲ್ಲಿನ ಗಲ್ವಾನ್ ಕಣಿವೆ ಘರ್ಷಣೆ ಸಾವು–ನೋವುಗಳಿಗೆ ಸಾಕ್ಷಿಯಾಗಿತ್ತು. ಎರಡೂ ಕಡೆಯವರು ಗಡಿ ಮಾತುಕತೆಯಲ್ಲಿ ತೊಡಗಿದ್ದರೂ ಕೂಡ ಭಾರತ-ಚೀನಾ ಸಂಬಂಧಗಳು ಹದಗೆಟ್ಟಿದ್ದು ಇದರಿಂದ ತಿಳಿಯುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.