ADVERTISEMENT

ಅಮೆರಿಕ ಪ್ರವಾಸದಲ್ಲಿ ಸಚಿವೆ ಮೀನಾಕ್ಷಿ ಲೇಖಿ: ಪ್ರಮುಖ ನಾಯಕರ ಭೇಟಿ

ಪಿಟಿಐ
Published 4 ಸೆಪ್ಟೆಂಬರ್ 2021, 7:51 IST
Last Updated 4 ಸೆಪ್ಟೆಂಬರ್ 2021, 7:51 IST
ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ    

ನ್ಯೂಯಾರ್ಕ್: ಅಮೆರಿಕ ಪ್ರವಾಸ ಕೈಗೊಂಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಶುಕ್ರವಾರ ಇಲ್ಲಿ ಬಂದಿಳಿದರು.

ಮೀನಾಕ್ಷಿ ಲೇಖಿ ಅವರು ಸೆ.6ರವರೆಗೆ ಕೊಲಂಬಿಯಾ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕದ ಪ್ರಮುಖ ನಾಯಕರನ್ನು ಭೇಟಿಯಾಗುವರು. ಕೊಲಂಬಿಯಾ ಉಪಾಧ್ಯಕ್ಷೆ ಮತ್ತು ವಿದೇಶಾಂಗ ಸಚಿವೆ ಮಾರ್ತಾ ಲೂಸಿಯಾ ರಮಿರೇಜ್‌ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿದ್ಯಮಾನಗಳ ಕುರಿತು ಸಹ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

‌ಸೆ.7 ರಿಂದ 9ರವರೆಗೆ ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ’ಶಾಂತಿಪಾಲನೆಗಾಗಿ ವಿಶ್ವಸಂಸ್ಥೆಯ ಕಾರ್ಯಾಚರಣೆ’ ಎಂಬ ವಿಷಯ ಕುರಿತು ಸೆ.8ರಂದು ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆಯಲ್ಲಿ ಅವರು ಪಾಲ್ಗೊಳ್ಳುವರು. ನಂತರ ಭಾರತೀಯ ಮೂಲದ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.