ADVERTISEMENT

ವೆನೆಜುವೆಲಾದ ಖ್ಯಾತ ರೂಪದರ್ಶಿ ಅರಿಯಾನಾ ವಿಯೆರಾ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2023, 10:53 IST
Last Updated 3 ಆಗಸ್ಟ್ 2023, 10:53 IST
ಅರಿಯಾನಾ ವಿಯೆರಾ
ಅರಿಯಾನಾ ವಿಯೆರಾ   ಅರಿಯಾನಾ ವಿಯೆರಾ ಅವರ ಇನ್‌ಸ್ಟಾಗ್ರಾಂ ಚಿತ್ರ

ಕಾರಕಾಸ್‌: ಕಿರಿಯ ವಯಸ್ಸಿಗೆ ವೆನಿಜುವೆಲಾದ ಖ್ಯಾತ ರೂಪದರ್ಶಿ, ‘ಮಿಸ್‌ ವೆನಿಜುವೆಲಾ‘ ಅರಿಯಾನಾ ವಿಯೆರಾ ಮೃತಪಟ್ಟಿದ್ದಾರೆ. ಅವರಿಗೆ 26 ವರ್ಷ ವಯಸ್ಸಾಗಿತ್ತು.

20 ದಿನಗಳ ಹಿಂದೆ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅರಿಯಾನಾ ಮೃತರಾಗಿದ್ದಾರೆ ಎಂದು ಅವರ ತಾಯಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಒರ್ಲ್ಯಾಂಡೊದ ಹೆದ್ದಾರಿಯಲ್ಲಿ ಅರಿಯಾನಾ ವಿಯೆರಾ ಅವರಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ಪೊಲೀಸರು, ಸ್ವತ ಅರಿಯಾನಾ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಹೇಳಿದ್ದರು. 

ADVERTISEMENT

ಅರಿಯಾನಾ ವಿಯೆರಾ ಅವರು ರೂಪದರ್ಶಿ, ನಟಿ ಮಾತ್ರವಲ್ಲದೇ 2023ರ ‘ಮಿಸ್‌ ವೆನಿಜುವೆಲಾ‘ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.