ADVERTISEMENT

ಕೇಂದ್ರ ಇಸ್ರೇಲ್ ಗುರಿಯಾಗಿಸಿ ಯೆಮೆನ್‌ನ ಹೂಥಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಪಿಟಿಐ
Published 14 ಜನವರಿ 2025, 4:35 IST
Last Updated 14 ಜನವರಿ 2025, 4:35 IST
   

ಜೆರುಸಲೇಂ: ಯೆಮೆನ್‌ನ ಹೂಥಿ ಬಂಡುಕೋರರು, ಕೇಂದ್ರ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಕ್ಷಿಪಣಿ ದಾಳಿ ನಡೆಸಿದ್ದಾರೆ.

ದಾಳಿ ಬಗ್ಗೆ ಸೈರನ್‌ ಮೊಳಗುತ್ತಿದ್ದಂತೆ ಜನರು ಬಾಂಬ್ ಶೆಲ್ಟರ್‌ಗಳಿಗೆ ಓಡಿಹೋಗಿದ್ದಾರೆ.

ಯೆಮೆನ್‌ನಿಂದ ಉಡಾವಣೆಯಾದ ಕ್ಷಿಪಣಿಯನ್ನು ಹಲವು ಪ್ರಯತ್ನಗಳ ಬಳಿಕ ಪ್ರತಿಬಂಧಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ADVERTISEMENT

ಕ್ಷಿಪಣಿ ಅಥವಾ ಬಿದ್ದ ಅವಶೇಷಗಳಿಂದ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ ತುರ್ತು ಸೇವೆಯು ತಿಳಿಸಿದೆ. ಆದರೂ ಆಶ್ರಯತಾಣಗಳಿಗೆ ಓಡುವಾಗ ಕೆಲವರು ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿಯು ಒಂದು ಕ್ಷಿಪಣಿಯನ್ನು ಹೂಥಿ ಉಡಾಯಿಸಿದ್ದು, ನಮ್ಮ ಭೂಪ್ರದೇಶ ಪ್ರವೇಶಿಸುವ ಮೊದಲೇ ಹೊಡೆದುರುಳಿಸಲಾಗಿದೆ ಎಂದು ಎಂದು ಇಸ್ರೇಲ್ ಹೇಳಿದೆ.

2014ರಿಂದ ಯೆಮೆನ್‌ನ ರಾಜಧಾನಿ ಸನಾವನ್ನು ಹಿಡಿದಲ್ಲಿಟ್ಟುಕೊಂಡಿರುವ ಇರಾನ್ ಬೆಂಬಲಿತ ಹೂಥಿ ಬಂಡುಕೋರರು, ಗಾಜಾಪಟ್ಟಿಯಲ್ಲಿರುವ ಹಮಾಸ್‌ನ ಮೇಲೆ ಇಸ್ರೇಲ್‌ನ ಯುದ್ಧದ ಪ್ರತೀಕಾರವಾಗಿ ಇಸ್ರೇಲ್ ಮತ್ತು ಸುಮಾರು 100 ವಾಣಿಜ್ಯ ಹಡಗುಗಳ ಮೇಲೆ ನೇರ ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.