ADVERTISEMENT

ಬ್ರಿಕ್ಸ್‌ ಶೃಂಗಸಭೆ: ಮೋದಿ ಬ್ರೆಜಿಲ್‌ಗೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 20:15 IST
Last Updated 13 ನವೆಂಬರ್ 2019, 20:15 IST
ಮೋದಿ
ಮೋದಿ   

ಬ್ರೆಸಿಲಿಯಾ: ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ, ಬ್ರೆಜಿಲ್‌ ರಾಜಧಾನಿ ಬ್ರೆಸಿಲಿಯಾಗೆ ಬುಧವಾರ ತಲುಪಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಯೋಜನೆ ರೂಪಿಸುವುದು ಮತ್ತು ಭಯೋತ್ಪಾದನೆ ದಮನಕ್ಕಾಗಿ ಎಲ್ಲರ ಸಹಕಾರದ ಕುರಿತ ಚರ್ಚೆ ಈ ಬಾರಿಯ ಸಭೆಯಲ್ಲಿ ನಡೆಯಲಿದೆ. ವಿಶ್ವದ ಬಲಶಾಲಿ ಅರ್ಥ ವ್ಯವಸ್ಥೆ ಹೊಂದಿರುವ ರಾಷ್ಟ್ರದ ಜೊತೆಗೆ ಭಾರತ ಸಂಬಂಧ ವೃದ್ಧಿಸಿಕೊಳ್ಳುವುದರ ಕುರಿತು ಪ್ರಧಾನಿ ಗಮನಹರಿಸಲಿದ್ದಾರೆ.

ಬ್ರೆಜಿಲ್‌ನೊಂದಿಗೆ ದ್ವಿಪಕ್ಷೀಯ ರಾಜತಾಂತ್ರಿಕ ಸಹಭಾಗಿತ್ವದ ಕುರಿತು ಅಧ್ಯಕ್ಷ ಜೈರ್‌ ಬೊಲ್ಸೊನಾರೊ ಅವರೊಂದಿಗೆ ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದಾರೆ. ಜತೆಗೆ, ರಷ್ಯಾ ಅಧ್ಯಕ್ಷ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಬುಧವಾರ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ADVERTISEMENT

‘ಬ್ರಿಕ್ಸ್‌’ ಬ್ರೆಜಿಲ್‌, ರಷ್ಷ್ಯಾಾ, ಭಾರತ, ಚೀನಾ ಹಾಗೂ ದಕ್ಷಿಣಆಫ್ರಿಕಾ ದೇಶಗಳ ಸಂಕ್ಷಿಪ್ತ ರೂಪವಾಗಿದ್ದು ಈ ರಾಷ್ಟ್ರಗಳು ಶೃಂಗದಲ್ಲಿ ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.