ADVERTISEMENT

ಮಿಲಿಟರಿ ದಂಗೆ ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಮತ್ತೆ ಬೀದಿಗಿಳಿದ ಜನ

ಏಜೆನ್ಸೀಸ್
Published 23 ಫೆಬ್ರುವರಿ 2021, 8:09 IST
Last Updated 23 ಫೆಬ್ರುವರಿ 2021, 8:09 IST
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ಪ್ರತಿಭಟನಕಾರರು ಯಾಂಗೂನ್‌ ನಗರದಲ್ಲಿ ಮಂಗಳವಾರ ಪ್ರದರ್ಶನ ನಡೆಸಿದರು  –ಎಎಫ್‌ಪಿ ಚಿತ್ರ
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ಪ್ರತಿಭಟನಕಾರರು ಯಾಂಗೂನ್‌ ನಗರದಲ್ಲಿ ಮಂಗಳವಾರ ಪ್ರದರ್ಶನ ನಡೆಸಿದರು  –ಎಎಫ್‌ಪಿ ಚಿತ್ರ   

ಯಾಂಗೂನ್‌: ದೇಶದಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ಜನರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

ದೇಶದ ದೊಡ್ಡ ನಗರವಾದ ಯಾಂಗೂನ್‌ನಲ್ಲಿ ಮಂಗಳವಾರ ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ಪ್ರಮುಖ ಸ್ಥಳವಾದ ಹೇಡನ್‌ ಸೆಂಟರ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜಮಾಯಿಸಿರುವ ಜನರು, ಮಿಲಿಟರಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರವೂ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಅಂದಿನ ಸಂಖ್ಯೆಗೆ ಹೋಲಿಸಿದರೆ ಮಂಗಳವಾರ ಪ್ರತಿಭಟನಕಾರರ ಸಂಖ್ಯೆ ಕಡಿಮೆ ಇತ್ತು.

ADVERTISEMENT

ಗುಂಪನ್ನು ಚದುರಿಸಲು ಶನಿವಾರ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು. ಈ ಪೈಕಿ 37 ವರ್ಷದ ಥೆಟ್‌ ನೈಂಗ್‌ ವಿನ್‌ ಎಂಬುವವರ ಅಂತ್ಯಸಂಸ್ಕಾರ ಮಂಡಲೇ ನಗರದಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.