ADVERTISEMENT

ಜ್ಯೂಜೆರ್ಸಿ: ‘ಐಡಾ‘ ಪರಿಣಾಮ ಮಳೆ, 45ಕ್ಕೂ ಹೆಚ್ಚು ಮಂದಿ ಸಾವು

ಏಜೆನ್ಸೀಸ್
Published 3 ಸೆಪ್ಟೆಂಬರ್ 2021, 21:15 IST
Last Updated 3 ಸೆಪ್ಟೆಂಬರ್ 2021, 21:15 IST
ಐಡಾ ಚಂಡಮಾರುತದ ಪರಿಣಾಮ ಅಮೆರಿಕದ ಜ್ಯೂಜೆರ್ಸಿಯ ಮ್ಯಾನ್‌ವಿಲೆಯು ಜಲಾವೃತವಾಗಿರುವ ಪಕ್ಷಿನೋಟ ಇದು.
ಐಡಾ ಚಂಡಮಾರುತದ ಪರಿಣಾಮ ಅಮೆರಿಕದ ಜ್ಯೂಜೆರ್ಸಿಯ ಮ್ಯಾನ್‌ವಿಲೆಯು ಜಲಾವೃತವಾಗಿರುವ ಪಕ್ಷಿನೋಟ ಇದು.   

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ಈಶಾನ್ಯ ಭಾಗದಲ್ಲಿ ‘ಐಡಾ’ ಚಂಡಮಾರುತ ಹಾಗೂ ನಂತರದ ಧಾರಾಕಾರ ಮಳೆಯ ಪರಿಣಾಮಗಳಿಂದ 45ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ನ್ಯೂಜೆರ್ಸಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಗವರ್ನರ್‌ ಫಿಲ್‌ ಮರ್ಫಿ ತಿಳಿಸಿದ್ದಾರೆ. ನ್ಯೂಯಾರ್ಕ್‌ ನಗರದಲ್ಲೇ 13 ಜನ ಸತ್ತಿದ್ದು, ನೆಲಮಹಡಿಯಲ್ಲಿ ನೀರು ಆವರಿಸಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ 500ಕ್ಕೂ ಅಧಿಕ ವಾಹನಗಳು ವಾಹನಗಳು ಕೊಚ್ಚಿ ಹೋಗಿವೆ. ಸೇತುವೆ, ಸುರಂಗ ಮಾರ್ಗಗಳು ಜಲಾವೃತವಾಗಿವೆ. ಕನಿಷ್ಠ 17 ರೈಲುಗಳ ಸಂಚಾರ ವ್ಯತ್ಯಯವಾಗಿದೆ. ನೀರಿನಲ್ಲಿ ಸಿಲುಕಿದ್ದ ಸುಮಾರು 835 ವಾಹನ ಚಾಲಕರನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.