ADVERTISEMENT

ಅಮೆರಿಕ: ಮನೆಯೊಂದರ ಕೆಳಗೆ ಇದ್ದ 90ಕ್ಕೂ ಹೆಚ್ಚು ವಿಷಸರ್ಪಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 10:12 IST
Last Updated 16 ಅಕ್ಟೋಬರ್ 2021, 10:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ, ಅಮೆರಿಕ: ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವಮಹಿಳೆಯೊಬ್ಬರ ಮನೆಯ ಅಡಿಯಲ್ಲಿ ಇತ್ತೀಚಿಗೆ 90 ಕ್ಕೂ ಹೆಚ್ಚು ವಿಷ ಸರ್ಪಗಳು ಕಾಣಿಸಿಕೊಂಡಿದ್ವವು. ಹಾವುಗಳು ಸುಪ್ತಸ್ಥಿತಿಯಲ್ಲಿರುವುದನ್ನು ಕಂಡು ಹೌಹಾರಿದ ಮಹಿಳೆ, ತಕ್ಷಣ ಉರಗ ತಜ್ಞ ಅಲ್‌ ವುಲ್ಫ್‌ ಅವರಿಗೆ ದೂರವಾಣಿ ಕರೆ ಮಾಡಿ, ನೆರವು ಕೋರಿದ್ದಾರೆ.

ಸೊನಾಮಾ ಕೌಂಟಿ ಸರೀಸೃಪ ರಕ್ಷಣೆ ಸಂಸ್ಥೆಯ ನಿರ್ದೇಶಕರಾದ ವೋಲ್ಫ್ ಅವರು ಸಾಂತಾ ರೋಸಾದಲ್ಲಿರುವ ಮನೆಗೆ ಧಾವಿಸಿದರು. ಅಲ್ಲಿ ಕಾಲಿಡುತ್ತಿದ್ದಂತೆ ಅವರಿಗೆ ಒಂದು ಹಾವು ಕಾಣಿಸಿತು. ನಂತರ ಸಾಲು ಸಾಲು ಹಾವುಗಳು ಕಾಣಿಸಿದವು ಎಂದು ಮೂಲಗಳು ಹೇಳಿವೆ.

ಅವರು ಉದ್ದವಾದ ಕೈಗವಸುಗಳನ್ನು ಧರಿಸಿ ಎರಡು ಬಕೆಟ್‌ಗಳನ್ನು ಹಿಡಿದು ಮನೆಯ ಅಡಿಯಲ್ಲಿ ಹೋದರು. 200ಕ್ಕೂ ಹೆಚ್ಚು ಸಣ್ಣ ಸಣ್ಣ ಬಂಡೆಗಳನ್ನು ಹಿಡಿದು ತೆವಳುತ್ತ ಸಾಗಿದರು.

ADVERTISEMENT

‘ನಾಲ್ಕು ಗಂಟೆಗಳ ಕಾಲ ನಾನು ಹಾವುಗಳನ್ನು ಹುಡುಕುತ್ತಲೇ ಇದ್ದೆ. ಅಲ್ಲಿ ಜೇಡರ ಬಲೆಗಳು, ದೂಳು, ಕೊಳಕು ಮತ್ತು ದುರ್ಗಂಧ ತುಂಬಿತ್ತು’ ಎಂದು ಅವರು ಹೇಳಿದರು.

‘ಮೊದಲು ಆ ಮನೆಗೆ ಭೇಟಿ ನೀಡಿದಾಗ 22 ಹಾವುಗಳು ಹಾಗೂ 59 ಹಾವಿನ ಹಾವುಗಳನ್ನು ಹಿಡಿದಿದ್ದೆ. ಕೆಲ ದಿನಗಳ ನಂತರ ಮತ್ತೆ ಹೋದ ಸಂದರ್ಭದಲ್ಲಿ 11 ಹಾವುಗಳನ್ನು ಹಿಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.