ADVERTISEMENT

ಇಂಗ್ಲೆಂಡ್‌: ಓಮೈಕ್ರಾನ್‌ ಸೋಂಕಿತರಲ್ಲಿ 2 ಡೋಸ್‌ ಪಡೆದವರೇ ಹೆಚ್ಚು

ಐಎಎನ್ಎಸ್
Published 4 ಡಿಸೆಂಬರ್ 2021, 12:12 IST
Last Updated 4 ಡಿಸೆಂಬರ್ 2021, 12:12 IST
   

ಲಂಡನ್‌: ಇಂಗ್ಲೆಂಡ್‌ನಲ್ಲಿ ಓಮೈಕ್ರಾನ್ ಕೊರೊನಾ ವೈರಸ್ ರೂಪಾಂತರದಿಂದ ಸೋಂಕಿಗೆ ಒಳಗಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಎರಡು ಡೋಸ್‌ ಲಸಿಕೆ ಪಡೆದವರೇ ಆಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿ ಕೋವಿಡ್‌ ಸಂಖ್ಯೆಯಲ್ಲಿ ತೀವ್ರವಾಗಿ ಏರುತ್ತಿದೆ ಎಂದೂ 'ದಿ ಗಾರ್ಡಿಯನ್' ವರದಿ ಮಾಡಿದೆ.

ಇಂಗ್ಲೆಂಡ್‌ನಲ್ಲಿ ಕೋವಿಡ್ -19 ಓಮೈಕ್ರಾನ್ ಪ್ರಕರಣಗಳು 104 ಕ್ಕೆ ತಲುಪಿವೆ ಎಂದು ಇಂಗ್ಲೆಂಡ್‌ನ ಆರೋಗ್ಯ ಭದ್ರತಾ ಏಜೆನ್ಸಿ (ಯುಕೆಎಚ್‌ಎಸ್‌ಎ) ಶುಕ್ರವಾರ ರಾತ್ರಿ ತಿಳಿಸಿದೆ. ಈ ಪ್ರಕರಣಗಳ ಹಿಂದೆ ಪ್ರಯಾಣದ ಹಿನ್ನೆಲೆ ಇಲ್ಲ. ಹೀಗಾಗಿ ಸಮುದಾಯ ಪ್ರಸರಣದ ಆತಂಕ ವ್ಯಕ್ತವಾಗಿದೆ.

ಮಿಡ್‌ಲ್ಯಾಂಡ್ಸ್, ಇಂಗ್ಲೆಂಡ್‌ ಪೂರ್ವ ಭಾಗದಲ್ಲಿ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ.

ADVERTISEMENT

ಇಂಗ್ಲೆಂಡ್‌ನಲ್ಲಿನ ಮೊದಲ 22 ಓಮೈಕ್ರಾನ್ ಪ್ರಕರಣಗಳನ್ನು ಅರೋಗ್ಯ ಭದ್ರತಾ ಏಜೆನ್ಸಿ ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಎರಡು ಡೋಸ್‌ ಲಸಿಕೆ ಪಡೆದವರಾಗಿದ್ದರು ಎಂದು ಸಂಸ್ಥೆ ಹೇಳಿದೆ. ಹೀಗಾಗಿ ವಿಶ್ವದಾದ್ಯಂತ ಆತಂಕ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.