ADVERTISEMENT

ಕತಾರ್‌ನಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಉದ್ಯಮಿ ಮುಕೇಶ್ ಅಂಬಾನಿ

ಟ್ರಂಪ್ ಎರಡನೇ ಭಾರಿ ಅಮೆರಿಕ ಅಧ್ಯಕ್ಷರಾದ ಮೇಲೆ ಟ್ರಂಪ್–ಅಂಬಾನಿ ಅವರ ಎರಡನೇ ಭೇಟಿ ಇದಾಗಿದೆ.

ಏಜೆನ್ಸೀಸ್
Published 16 ಮೇ 2025, 11:02 IST
Last Updated 16 ಮೇ 2025, 11:02 IST
<div class="paragraphs"><p>ಕತಾರ್‌ನಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಉದ್ಯಮಿ ಮುಕೇಶ್ ಅಂಬಾನಿ</p></div>

ಕತಾರ್‌ನಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಉದ್ಯಮಿ ಮುಕೇಶ್ ಅಂಬಾನಿ

   

ಬೆಂಗಳೂರು: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಕತಾರ್‌ನಲ್ಲಿ ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು.

ಟ್ರಂಪ್ ಅವರ ಎರಡು ದಿನಗಳ ಕತಾರ್ ಭೇಟಿಯ ಪ್ರಯುಕ್ತ ಕತಾರ್‌ನ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು ದೋಹಾದ ಅರಮನೆ ಲೂಸಿಲ್‌ನಲ್ಲಿ ಗಣ್ಯರಿಗೆ ಔತಣಕೂಟ ಆಯೋಜಿಸಿದ್ದರು.

ADVERTISEMENT

ಔತಣಕೂಟದ ವೇಳೆ ಡೊನಾಲ್ಡ್ ಟ್ರಂಪ್ ಹಾಗೂ ಮುಕೇಶ್ ಅಂಬಾನಿ ಅನೌಪಚಾರಿಕವಾಗಿ ಭೇಟಿಯಾಗಿ ಉಭಯ ಕುಶಲೋಪರಿ ಮಾತನಾಡಿದರೆಂದು ಸುದ್ದಿಸಂಸ್ಥೆ ಪಿಟಿಐ ವಿಡಿಯೊ ಪೋಸ್ಟ್ ಹಂಚಿಕೊಂಡಿದೆ.

ಟ್ರಂಪ್ ಎರಡನೇ ಭಾರಿ ಅಮೆರಿಕ ಅಧ್ಯಕ್ಷರಾದ ಮೇಲೆ ಟ್ರಂಪ್–ಅಂಬಾನಿ ಅವರ ಎರಡನೇ ಭೇಟಿ ಇದಾಗಿದೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಅಮೆರಿಕದ ವಾಣಿಜ್ಯ ಸಚಿವ ಸ್ವಿವನ್ ಲುಟ್ನಿಕ್ ಅವರ ಜೊತೆ ಮುಕೇಶ್ ಅಂಬಾನಿ ಅವರು ಬಹಳ ಹೊತ್ತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ.

ಕತಾರ್ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿದ್ದು, ಕಳೆದ ಫೆಬ್ರುವರಿಯಲ್ಲಿ ಕತಾರ್‌ನ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಭಾರತ ಪ್ರವಾಸ ಕೈಗೊಂಡಿದ್ದರು.

ಕತಾರ್‌ನ ಕತಾರ್ ಹೂಡಿಕೆ ಪ್ರಾಧಿಕಾರ (ಕ್ಯೂಐಎ) ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಜ್‌ನಲ್ಲಿ ಸುಮಾರು ₹8.5 ಸಾವಿರ ಕೋಟಿ ಹೂಡಿಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.