ADVERTISEMENT

ಮ್ಯಾನ್ಮಾರ್ ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂ ಕಿಗೆ ನಗದು ಪಾವತಿ: ಉದ್ಯಮಿ ಹೇಳಿಕೆ

ಏಜೆನ್ಸೀಸ್
Published 18 ಮಾರ್ಚ್ 2021, 8:58 IST
Last Updated 18 ಮಾರ್ಚ್ 2021, 8:58 IST
ಸೂಕಿ
ಸೂಕಿ   

ಮ್ಯಾಂಡಲೆ, ಮ್ಯಾನ್ಮಾರ್‌: ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂ ಕಿ ಅವರಿಗೆ ಐದು ಲಕ್ಷಕ್ಕೂ ಅಧಿಕ ಡಾಲರ್‌ಅನ್ನು ನಗದು ರೂಪದಲ್ಲಿ ಪಾವತಿಸಿದ್ದಾಗಿ ನಿರ್ಮಾಣ ಕ್ಷೇತ್ರದ ಪ್ರಮುಖ ಉದ್ಯಮಿಯೊಬ್ಬರು ಹೇಳಿದ್ದಾರೆ.

ಉದ್ಯಮಿ ಮೌಂಗ್‌ ವೇಕ್‌ ಈ ಹೇಳಿಕೆ ನೀಡಿದ್ದು, ಸರ್ಕಾರಿ ಒಡೆತನದ ಟಿ.ವಿ ಚಾನೆಲ್‌ನಲ್ಲಿ ಇದು ಪ್ರಸಾರವಾಗಿದೆ. ವೇಕ್‌ ಅವರು ಮಿಲಿಟರಿ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಸೂ ಕಿ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಹೊರಿಸಲು ಉದ್ಯಮಿಯ ಈ ಹೇಳಿಕೆ ಕಾರಣವಾಗಲಿದೆ ಎಂದೂ ಹೇಳಲಾಗುತ್ತಿದೆ.

ADVERTISEMENT

ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ವೇಕ್‌ ಅವರಿಗೆ ಈ ಹಿಂದೆ ಶಿಕ್ಷೆ ವಿಧಿಸಲಾಗಿತ್ತು. ‘ತನ್ನ ವ್ಯವಹಾರ ಸುಸೂತ್ರವಾಗಿ ನಡೆಯಲು ಸಹಕಾರ ನೀಡುವ ಸಂಬಂಧ ಹಲವಾರು ಸಚಿವರಿಗೆ ಹಣ ಪಾವತಿಸಿದ್ದೆ. ಸೂ ಕಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಚಾರಿಟಬಲ್‌ಗೆ 2018ರಲ್ಲಿ ಒಂದು ಲಕ್ಷ ಅಮೆರಿಕನ್‌ ಡಾಲರ್‌ ನೀಡಿದ್ದೆ’ ಎಂದೂ ವೇಕ್‌ ಹೇಳಿದ್ದಾರೆ.

ಸೂ ಕಿ ಅವರನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸಲು ಮಿಲಿಟರಿ ಪ್ರಯತ್ನಿಸುತ್ತಿದೆ. ರಾಜಕೀಯ ಪಕ್ಷವೊಂದರಿಂದ ಬಹುಮೌಲ್ಯದ ಚಿನ್ನದ ಗಟ್ಟಿಗಳನ್ನು ಸೂ ಕಿ ಪಡೆದಿದ್ದಾರೆ ಎಂದು ಮಿಲಿಟರಿಈಗಾಗಲೇ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.