ADVERTISEMENT

ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆ; ಇಂಟರ್‌ನೆಟ್‌ ಸೇವೆ ಸ್ಥಗಿತ

ಏಜೆನ್ಸೀಸ್
Published 16 ಫೆಬ್ರುವರಿ 2021, 7:40 IST
Last Updated 16 ಫೆಬ್ರುವರಿ 2021, 7:40 IST
ಯಾಂಗೂನ್‌ನ ಅಮೆರಿಕದ ರಾಯಭಾರ ಕಚೇರಿ ಮುಂದೆ ಘೋಷಣಾ ಫಲಕಗಳನ್ನು ಹಿಡಿದು ‍ಪ್ರತಿಭಟಿಸುತ್ತಿರುವ ಜನರು                       –ಎಎಫ್‌ಪಿ ಚಿತ್ರ
ಯಾಂಗೂನ್‌ನ ಅಮೆರಿಕದ ರಾಯಭಾರ ಕಚೇರಿ ಮುಂದೆ ಘೋಷಣಾ ಫಲಕಗಳನ್ನು ಹಿಡಿದು ‍ಪ್ರತಿಭಟಿಸುತ್ತಿರುವ ಜನರು                       –ಎಎಫ್‌ಪಿ ಚಿತ್ರ   

ಯಾಂಗೂನ್‌: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರ ಸಹ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಎರಡು ವಾರಗಳ ಹಿಂದೆ ಮ್ಯಾನ್ಮಾರ್‌ ಸೇನೆಯು ಅಲ್ಲಿನ ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿದೆ. ಇದನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದೆ.

ಮ್ಯಾನ್ಮಾರ್‌ನಲ್ಲಿ ಪ್ರತಿಭಟನೆಗಳು ಮತ್ತು ನಾಗರಿಕ ಸೇವಕರಿಂದ ಅಸಹಕಾರ ಚಳವಳಿಗಳು ನಗರ ಪ್ರದೇಶಗಳ ಜತೆಗೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ.ಇದನ್ನು ಹತ್ತಿಕ್ಕಲು ಸೇನಾ ಆಡಳಿತವು ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಯನ್ನು ನಿಯೋಜಿಸಿದೆ.

ADVERTISEMENT

ಮಾಂಡಲೆ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ‍್ಯಾಲಿಯನ್ನು ಚದುರಿಸಲು ಸೇನೆಯು ರಬ್ಬರ್‌ ಬುಲೆಟ್‌ಗಳನ್ನು ಬಳಸಿದೆ. ಈ ವೇಳೆ ಆರು ಮಂದಿಗೆ ಗಾಯಗಳಾಗಿವೆ. ಯಾಂಗೂನ್‌ನಲ್ಲೂ ಮಂಗಳವಾರ ಭಾರೀ ಪ್ರಮಾಣದಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.