ADVERTISEMENT

ಮ್ಯಾನ್ಮಾರ್‌ನಲ್ಲಿ ಯುವಕರು ಸೇನೆ ಸೇರುವುದು ಕಡ್ಡಾಯ: ವರದಿ

ರಾಯಿಟರ್ಸ್
Published 11 ಫೆಬ್ರುವರಿ 2024, 14:23 IST
Last Updated 11 ಫೆಬ್ರುವರಿ 2024, 14:23 IST
<div class="paragraphs"><p>ಮ್ಯಾನ್ಮಾರ್‌ನ ಮಿಲಿಟರಿ</p></div>

ಮ್ಯಾನ್ಮಾರ್‌ನ ಮಿಲಿಟರಿ

   

 ರಾಯಿಟರ್ಸ್‌ ಚಿತ್ರ

ನೈಪಿತಾವ್ : ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು ದೇಶದ ಎಲ್ಲ ಯುವಕ ಮತ್ತು ಯುವತಿಯರು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ADVERTISEMENT

18 ರಿಂದ 35 ವರ್ಷ ವಯಸ್ಸಿನ ಯುವಕರು ಮತ್ತು 18 ರಿಂದ 27 ವರ್ಷ ವಯಸ್ಸಿನ ಯುವತಿಯರು 2 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. 45 ವರ್ಷ ವಯಸ್ಸಿನವರೆಗಿನ ವೈದ್ಯರು ಮುಂತಾದ ಪರಿಣಿತರು ಮೂರು ವರ್ಷಗಳ ಕಾಲ ಸೇನೆಗೆ ಸೇವೆ ಸಲ್ಲಿಸಬೇಕು. 

‘ದೇಶವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸೈನಿಕರದ್ದಲ್ಲ, ಪ್ರತಿಯೊಬ್ಬ ನಾಗರಿಕನದ್ದು. ಹಾಗಾಗಿ ಎಲ್ಲರೂ ನಾಗರಿಕ ಸೇನಾ ಸೇವಾ ಕಾನೂನನ್ನು ಹೆಮ್ಮೆಯಿಂದ ಪಾಲಿಸಬೇಕು’ ಎಂದು ಮಿಲಿಟರಿ ಸರ್ಕಾರದ ವಕ್ತಾರ ಝಾ ಮಿನ್ ಟುನ್‌ ತಿಳಿಸಿದ್ದಾರೆ.

2021ರಿಂದ ಸೇನೆಯ ನಿಯಂತ್ರಣದಲ್ಲಿರುವ ಮ್ಯಾನ್ಮಾರ್‌ನಲ್ಲಿ ಯೋಧರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕಾನೂನನ್ನು ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.