ADVERTISEMENT

ಮ್ಯಾನ್ಮಾರ್‌: ಸೂ ಕಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ ಮಿಲಿಟರಿ

ಏಜೆನ್ಸೀಸ್
Published 10 ಜೂನ್ 2021, 6:00 IST
Last Updated 10 ಜೂನ್ 2021, 6:00 IST
ಕೋರ್ಟ್‌ ವಿಚಾರಣೆಗೆ ಹಾಜರಾಗಿರುವ  ಆಂಗ್‌ ಸಾನ್‌ ಸೂಕಿ (ಎಎಫ್‌ಪಿ)
ಕೋರ್ಟ್‌ ವಿಚಾರಣೆಗೆ ಹಾಜರಾಗಿರುವ ಆಂಗ್‌ ಸಾನ್‌ ಸೂಕಿ (ಎಎಫ್‌ಪಿ)   

ಯಾಂಗೂನ್‌ (ಎಎಫ್‌ಪಿ): ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂ ಕಿ ಅವರ ವಿರುದ್ಧ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದೆ.

‘ಸೂ ಕಿ ಅವರು ಅಕ್ರಮವಾಗಿ 11 ಕೆ.ಜಿ ಚಿನ್ನ ಹಾಗೂ ₹ 4.37 ಕೋಟಿ (6 ಲಕ್ಷ ಅಮೆರಿಕನ್‌ ಡಾಲರ್‌) ನಗದು ಸ್ವೀಕರಿಸಿದ್ದಾರೆ’ ಎಂಬ ಆರೋಪಗಳನ್ನು ಹೊರಿಸಲಾಗಿದೆ ಎಂದು ‘ಗ್ಲೋಬಲ್‌ ನ್ಯೂ ಲೈಟ್‌ ಆಫ್‌ ಮ್ಯಾನ್ಮಾರ್‌’ ಸರ್ಕಾರಿ ಒಡೆತನದ ಪತ್ರಿಕೆ ವರದಿ ಮಾಡಿದೆ.

‘ಸೂ ಕಿ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದು, ಭ್ರಷ್ಟಾಚಾರ ವಿರೋಧಿ ಆಯೋಗವು ಈ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ’ ಎಂದೂ ಪತ್ರಿಕೆ ವರದಿ ಮಾಡಿದೆ.

ADVERTISEMENT

‘ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಒಡೆತನದ ಚಾರಿಟಬಲ್‌ ಪ್ರತಿಷ್ಠಾನಗಳಿಗೆ ಜಮೀನನ್ನು ಬಾಡಿಗೆಗೆ ನೀಡಿದ್ದರು. ದೇಶದ್ರೋಹ ಹಾಗೂ ಹಲವಾರು ಕ್ರಿಮಿನಲ್‌ ಆರೋಪಗಳನ್ನು ಸಹ ಸೂ ಕಿ ಅವರ ವಿರುದ್ಧ ಹೊರಿಸಲಾಗಿದೆ’ ಎಂದು ವರದಿ ಮಾಡಿದೆ.

ಸೂ ಕಿ ವಿರುದ್ಧದ ಆರೋಪಗಳ ವಿಚಾರಣೆಯು ಜೂನ್‌ 14ರಿಂದ ಆರಂಭವಾಗಲಿದೆ. ಭ್ರಷ್ಟ್ರಾಚಾರದ ಆರೋಪಗಳ ಜೊತೆಗೆ, ಕಳೆದ ವರ್ಷ ಚುನಾವಣೆ ವೇಳೆ ಕೋವಿಡ್‌–19 ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ನಿರ್ಬಂಧಗಳ ಉಲ್ಲಂಘನೆ, ಪರವಾನಗಿ ಇಲ್ಲದೇ ವಾಕಿ–ಟಾಕಿ ಸಾಧನಗಳನ್ನು ಖರೀದಿಸಿದ ಆರೋಪಗಳನ್ನು ಸಹ ಅವರ ವಿರುದ್ಧ ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.