ADVERTISEMENT

ಮ್ಯಾನ್ಮಾರ್‌: ಸೂಕಿಗೆ 17ರವರೆಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 6:16 IST
Last Updated 15 ಫೆಬ್ರುವರಿ 2021, 6:16 IST
ಮ್ಯಾನ್ಮಾರ್‌ನ ನಾಯ್ಪಿಟಾವ್‌ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಜನರು
ಮ್ಯಾನ್ಮಾರ್‌ನ ನಾಯ್ಪಿಟಾವ್‌ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಜನರು   

ಯಾಂಗೊನ್: ‘ಮ್ಯಾನ್ಮಾರ್‌ನ ಉಚ್ಚಾಟಿತನಾಯಕಿ ಆಂಗ್ ಸಾನ್ ಸೂಕಿ ಅವರು ಸೋಮವಾರದ ಬದಲಿಗೆ ಬುಧವಾರ ವಿಚಾರಣೆಗಾಗಿನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿಯವರಿಗೆ ಅವರನ್ನು ಬಂಧನದಲ್ಲೇ ಇರಿಸಲು ಸೇನಾಡಳಿತ ನಿರ್ಧರಿಸಿದಂತಿದೆ’ ಎಂದು ‌ ಸೂಕಿ ಪರ ವಕೀಲರು ತಿಳಿಸಿ‌ದ್ದಾರೆ.

‘ಪ್ರಾರಂಭದ ವಿಚಾರಣೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ, ಆದರೆ ಈ ವಿಚಾರಣೆ ನ್ಯಾಯಸಮ್ಮತವಾಗಿ ನಡೆಯುತ್ತದೆಯೇ ಎಂಬುದನ್ನು ನೀವೇ ಊಹಿಸಿ’ ಎಂದು ವಕೀಲ ಖಿನ್ ಮಾಂಗ್ ಜಾವ್ ಅವರು ಮಾಧ್ಯಮದವರಿಗೆ ತಿಳಿಸಿದರು.

ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ: ಮ್ಯಾನ್ಮಾರ್‌ನ ಯಾಂಗೊನ್‌ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಭಾನುವಾರ ರಾತ್ರಿ ಪ್ರತಿಭಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸೇನಾ ಶಸಾಸ್ತ್ರ ಪಡೆಯನ್ನು ನಿಯೋಜಿಸಲಾಗಿದ್ದು, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ADVERTISEMENT

ಅಮೆರಿಕ, ಕೆನಡಾ ಮತ್ತು 12 ಯುರೋಪಿಯನ್‌ ರಾಷ್ಟ್ರಗಳ ರಾಯಭಾರಿಗಳು ಪ್ರತಿಭಟನಕಾರರ ಮೇಲೆ ಹಿಂಸಾತ್ಮಕ ನಡೆಯನ್ನು ಕೈಗೊಳ್ಳಬಾರದು. ನ್ಯಾಯಯುತವಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಡಬೇಕು ಎಂದು ಮ್ಯಾನ್ಮಾರ್‌ ಸೇನೆಗೆ ಮನವಿ ಮಾಡಿದ್ಧಾರೆ.

ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.