ADVERTISEMENT

ಮ್ಯಾನ್ಮಾರ್: ಮೊದಲ ಬಾರಿಗೆ ಕೋರ್ಟ್‌ಗೆ ಹಾಜರಾದ ಸೂಕಿ

ಏಜೆನ್ಸೀಸ್
Published 24 ಮೇ 2021, 15:27 IST
Last Updated 24 ಮೇ 2021, 15:27 IST
ಆಂಗ್ ಸಾನ್ ಸೂಕಿ
ಆಂಗ್ ಸಾನ್ ಸೂಕಿ   

ಬ್ಯಾಂಕಾಕ್: ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರು ಸೋಮವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಫೆ. 1ರಂದು ಅಧಿಕಾರವನ್ನು ವಶಪಡಿಸಿಕೊಂಡು ಅಲ್ಲಿನ ಮಿಲಿಟರಿ ಸೇನೆಯು ಸೂಕಿ ಅವರನ್ನು ಬಂಧಿಸಿದ ನಂತರ ಇದೇ ಮೊದಲ ಬಾರಿಗೆ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ರಾಜಧಾನಿ ನಾಯ್ಪಿಟಾವ್‌ನಲ್ಲಿ ಸಿಟಿ ಕೌನ್ಸಿಲ್ ಕಟ್ಟಡಲ್ಲಿ ರೂಪಿಸಲಾಗಿದ್ದ ವಿಶೇಷ ನ್ಯಾಯಾಲಯಕ್ಕೆ ಬಂದ ಸೂಕಿ ಅವರು, ವಿಚಾರಣೆಗೂ ಮುನ್ನ ಸುಮಾರು 30 ನಿಮಿಷಗಳ ಕಾಲ ತಮ್ಮ ರಕ್ಷಣಾ ತಂಡವನ್ನು ಭೇಟಿ ಮಾಡಿದರು ಎಂದು ಸೂಕಿ ಅವರ ಪರ ವಕೀಲರಾದ ಮಿನ್ ಮಿನ್ ಸೋ ಅವರು ತಿಳಿಸಿದ್ದಾರೆ.

ADVERTISEMENT

ಸೋಮವಾರ ನಡೆದ ವಿಚಾರಣೆಯಲ್ಲಿ ಸೂಕಿ ಎದುರಿಸುತ್ತಿರುವ ಆರು ಆರೋಪಗಳ ಪ್ರಕರಣಗಳಿದ್ದವು. ಸೂಕಿ ಅವರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿರುವ ಗಂಭೀರವಾದ ಆರೋಪವಿದೆ.

ಸೂಕಿ ಅವರಿಗೆ ಈ ಹಿಂದೆ ನ್ಯಾಯಾಲಯಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಕಾರ್ಯಗಳಿಗೆ ಹಾಜರಾಗುತ್ತಿದ್ದರು. ಸೂಕಿ ಅವರಿಗೆ ವೈಯಕ್ತಿಕವಾಗಿ ತಮ್ಮ ವಕೀಲರನ್ನಾಗಲೀ ಅಥವಾ ಇತರರನ್ನಾಗಲೀ ಭೇಟಿಯಾಗುವ ಅವಕಾಶವೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.