ADVERTISEMENT

ಭೂಮಿ ಸಮೀಪ ‘ಸೂಪರ್ ಅರ್ಥ್’

ಪಿಟಿಐ
Published 1 ಆಗಸ್ಟ್ 2019, 20:00 IST
Last Updated 1 ಆಗಸ್ಟ್ 2019, 20:00 IST
   

ವಾಷಿಂಗ್ಟನ್: ನಮ್ಮ ಸೌರವ್ಯೂಹದಿಂದ 31 ಲಕ್ಷ ಜ್ಯೋತಿರ್ವರ್ಷ ದೂರದಲ್ಲಿ ಮನುಷ್ಯನ ವಾಸಕ್ಕೆ ಹೆಚ್ಚು ಸೂಕ್ತವಾಗಬಲ್ಲಂತಹ ಲಕ್ಷಣಗಳಿರುವ ಹೊಸ ಗ್ರಹವೊಂದನ್ನು ನಾಸಾದ ಉಪಗ್ರಹ ಪತ್ತೆ ಮಾಡಿದೆ.

ನಾಸಾದ ಟ್ರಾನ್ಸಿಟಿಂಗ್ ಎಕ್ಸೊಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟಿಇಎಸ್‌ಎಸ್–ಟೆಸ್ ) ಈ ಗ್ರಹವನ್ನು ಪತ್ತೆ ಹಚ್ಚಿದ್ದು, ಇದಕ್ಕೆ ‘ಜಿಜೆ 357 ಡಿ (GJ 357 d)’ ಎಂದು ಹೆಸರಿಡಲಾಗಿದೆ.

ಲೆಟರ್ಸ್‌ ಖಗೋಳ ಭೌತವಿಜ್ಞಾನ ನಿಯತಕಾಲಿಕೆಯಲ್ಲಿ ಈ ಕುರಿತ ಸಂಶೋಧನಾ ವರದಿ ಪ್ರಕಟವಾಗಿದೆ.

ADVERTISEMENT

‘ಈ ಸೂಪರ್ ಅರ್ಥ್ ಗ್ರಹ, ನಮ್ಮ ಭೂಮಿಗಿಂತಲೂ ಶೇ 22ರಷ್ಟು ಬೃಹತ್ತಾಗಿದ್ದು, ಇದರ ಮೇಲ್ಮೈನಲ್ಲಿ ನೀರು ಇರುವ ಸಾಧ್ಯತೆ ಇದೆ. ದೂರದರ್ಶಕದ ಮೂಲಕ ಅಲ್ಲಿ ಜೀವಿಗಳು ಇರುವ ಲಕ್ಷಣಗಳನ್ನು ಶೀಘ್ರ ಪತ್ತೆ ಮಾಡಲಾಗುವುದು’ ಎಂದು ಟೆಸ್ ತಂಡದ ಸದಸ್ಯೆ ಲೀಸಾ ಕಾಲ್ಟ್‌ನೆಗರ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.