ವಾಷಿಂಗ್ಟನ್: ‘ಹೊಸ ಇನ್‌ಸ್ಟ್ರಾನಾಸಲ್ ಕೋವಿಡ್ ಲಸಿಕೆಯ ಒಂದು ಡೋಸ್ (ಮೂಗಿನ ಮೂಲಕ ನೀಡುವ ಲಸಿಕೆ) ಮಾರಣಾಂತಿಕ ಸೋಂಕಿನಿಂದ ಇಲಿಗೆ ರಕ್ಷಣೆ ನೀಡುತ್ತದೆ ಮತ್ತು ಪ್ರಾಣಿಗಳಿಗೆ 'ಸಾರ್ಸ್-ಕೋವ್-2'ಸೋಂಕು ಹರಡದಂತೆ ತಡೆಯುವುದನ್ನು ತೋರಿಸಿಕೊಟ್ಟಿದೆ’ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಲಸಿಕೆಯನ್ನು ಮೂಗಿನ ಮೇಲೆ ಸಿಂಪಡಿಸುವ ಮೂಲಕ ನೀಡಲಾಗುವುದು. ಇದು ಇನ್‌ಫ್ಲೂನ್ಜಾದಂತಹ ರೋಗಗಳಿಗೆ ನೀಡಲಾಗುವ ಲಸಿಕೆಗೆ ಹೋಲುತ್ತದೆ ಎಂದು ತಿಳಿಸಲಾಗಿದ್ದು, ಚುಚ್ಚುಮದ್ದಿನ ಮೂಲಕ ಇದೀಗ ನೀಡಲಾಗುತ್ತಿರುವ ಕೋವಿಡ್ ಲಡಿಕೆಗೆ ಇದು ಪರ್ಯಾಯವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
‘ಕೋವಿಡ್–19 ವಿರುದ್ಧ ಪ‍್ರಸ್ತುತ ಲಭ್ಯವಿರುವ ಲಸಿಕೆಗಳು ಯಶಸ್ವಿಯಾಗಿವೆ. ಆದರೆ, ವಿಶ್ಚದಲ್ಲಿ ಬಹುತೇಕ ಜನರು ಇನ್ನೂ ಲಸಿಕೆ ಪಡೆದಿಲ್ಲ. ಹಾಗಾಗಿ ಸೋಂಕಿನ ಪ್ರಸರಣವನ್ನು ತಡೆಯುವ ಪರಿಣಾಮಕಾರಿ ಮತ್ತು ಬಳಸಲು ಸುಲಭವಾದ ಲಸಿಕೆಯ ಅವಶ್ಯಕತೆ ಇದೆ’ ಎಂದು ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೌಲ್ ಮೆಕ್‌ಕ್ರೇ ಅವರು ತಿಳಿಸಿದರು.
‘ಒಂದು ವೇಳೆ ಈ ಹೊಸ ಕೋವಿಡ್ ಲಸಿಕೆಯು ಜನರ ಮೇಲೆ ಪರಿಣಾಮಕಾರಿಯಾಗಿದ್ದರೆ, ಇದು 'ಸಾರ್ಸ್-ಕೋವ್-2' ಪ್ರಸರಣವನ್ನು ತಡೆಯಬಹುದು. ಆಗ ಕೋವಿಡ್ ಪಿಡುಗನ್ನು ನಿಯಂತ್ರಿಸಬಹುದು’ ಎಂದು ಅಧ್ಯಯನದ ಸಹ ನಾಯಕನಾಗಿರುವ ಪೌಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.