ADVERTISEMENT

ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ ಅಗತ್ಯ: ಭಾರತ ಸಲಹೆ

ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್ ಕೌನ್ಸೆಲರ್ ಪ್ರತೀಕ್ ಮಾಥೂರ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 10:31 IST
Last Updated 8 ಡಿಸೆಂಬರ್ 2020, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಭವಿಷ್ಯದಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ಪರಿಣಾಮಗಳನ್ನು ಎದುರಿಸಲು ಜಾಗತಿಕ ಸಮುದಾಯವು ಧೀರ್ಘಕಾಲೀನ ಕಾರ್ಯತಂತ್ರ ಮತ್ತು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸಿದೆ.

ಈ ಸಾಂಕ್ರಾಮಿ ರೋಗಗಳನ್ನು ಎದುರಿಸಲು ಬೇಕಾಗುವ ಹೊಸ ತಂತ್ರಜ್ಞಾನಗಳ ಜತೆಗೆ, ಕೈಗೆಟಕುವ ಬೆಲೆಯಲ್ಲಿ ಔಷಧಗಳು ದೊರೆಯಲು ಇರುವಂತಹ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಅದು ಒತ್ತಿ ಹೇಳಿದೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ‘ಜಾಗತಿಕ ಆರೋಗ್ಯ ಮತ್ತು ವಿದೇಶ ನೀತಿ‘ ಕುರಿತು ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಕಾಯಂ ಮಿಷನ್ ಕೌನ್ಸೆಲರ್ ಪ್ರತೀಕ್ ಮಾಥೂರ್, ‘ಪ್ರಸ್ತುತವಿರುವ ಆರೋಗ್ಯ ಕಾರ್ಯಕ್ರಮಗಳನ್ನು ಬಳಸಿಕೊಂಡು, ಜಾಗತಿಕ ಮಟ್ಟದಲ್ಲಿ ಔಷಧ ಪತ್ತೆ, ಕೈಗೆಟಕುವ ಚಿಕತ್ಸೆಯಂತಹ ಆರೋಗ್ಯ ವ್ಯವಸ್ಥೆಯನ್ನು ಬಲವರ್ಧನೆ ಗೊಳಿಸಬೇಕು‘ ಎಂದರು.

ADVERTISEMENT

‘ಭವಿಷ್ಯದಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ಎದುರಿಸುವಂತಹ ವ್ಯವಸ್ಥೆಯನ್ನು ರೂಪಿಸಲು ನಾವು ದೀರ್ಘಾವಧಿಯ ಕಾರ್ಯತಂತ್ರಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕಿದೆ‘ ಎಂದು ಹೇಳಿದರು.

ಡಬ್ಲ್ಯುಟಿಒ ಟ್ರಿಪ್ಸ್‌ ಒಪ್ಪಂದ ಮತ್ತು ದೋಹಾ ನಿರ್ಣಯವೂ ಸೇರಿದಂತೆ ಔಷಧಗಳು ಮತ್ತು ತಂತ್ರಜ್ಞಾನಗಳ ಬಳಸಲು ಇರುವ ಅಡೆತಡೆಗಳನ್ನು ನಿವಾರಿಸುವ ಕಡೆ ರಾಷ್ಟ್ರಗಳು ಗಮನ ಹರಿಸಬೇಕು ಎಂಬುದನ್ನು ಮಾಥುರ್ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.