ಲಂಡನ್: ರಷ್ಯಾದ ಬೆದರಿಕೆಗೆ ತಿರುಗೇಟು ನೀಡಲು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೋ–ಶಾಂತಿ ಕಾಲದ ಮಿಲಿಟರಿ ಮೈತ್ರಿ) ಸದಸ್ಯ ರಾಷ್ಟ್ರಗಳು ತಮ್ಮ ವಾಯು ಮತ್ತು ಕ್ಷಿಪಣಿ ಸೇನಾ ಸಾಮರ್ಥ್ಯವನ್ನು ಶೇ 400ರಷ್ಟು ಹೆಚ್ಚಳ ಮಾಡಿಕೊಳ್ಳುವ ಅಗತ್ಯ ಇದೆ ಎಂದು ನ್ಯಾಟೋ ಸಮ್ಮೇಳನದಲ್ಲಿ ಸೇನಾ ಮೈತ್ರಿಯ ಮುಖ್ಯಸ್ಥರು ಪ್ರಸ್ತಾಪಿಸಲು ತಯಾರಿ ನಡೆಸಿದ್ದಾರೆ.
ಲಂಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರಟ್ ಈ ಅಂಶವನ್ನು ಹೇಳಲಿದ್ದಾರೆ. ‘ತೀವ್ರಗೊಳ್ಳುತ್ತಿರುವ ಅಭದ್ರತೆ ಮತ್ತು ಬೆದರಿಕೆಗಳನ್ನು ಎದುರಿಸಲು ನ್ಯಾಟೋ ಸದಸ್ಯ ರಾಷ್ಟ್ರಗಳು ಭದ್ರತೆ ವಿಷಯದಲ್ಲಿ ಸಂಘಟಿತರಾಗಿ ತುರ್ತು ಹೆಜ್ಜೆ ಇಡುವ ಅಗತ್ಯ ಇದೆ’ ಎಂಬ ಪ್ರಮುಖ ಅಂಶ ಇರುವ ಮಾರ್ಕ್ ರಟ್ ಭಾಷಣದ ತುಣುಕನ್ನು ನ್ಯಾಟೋ ಬಿಡುಗಡೆ ಮಾಡಿದೆ.
ನೆದರ್‌ಲ್ಯಾಂಡ್‌ನ ಹೇಗ್‌ನಲ್ಲಿ ಜೂನ್ 24 ಮತ್ತು 25ರಂದು ನ್ಯಾಟೋ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ 32 ಸದಸ್ಯ ರಾಷ್ಟ್ರಗಳ ಒಕ್ಕೂಟ ನ್ಯಾಟೋ ಸೇನಾ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಬದ್ಧತೆ ತೋರಲಿದೆ. ಅದಕ್ಕೂ ಮುನ್ನ, ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ರಟ್ ಅವರು ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಭೇಟಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.