ADVERTISEMENT

NATO Summit | ನ್ಯಾಟೊ ಶೃಂಗಸಭೆ ನಿರ್ಧಾರ ಶ್ಲಾಘಿಸಿದ ಝೆಲೆನ್‌ಸ್ಕಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 14:10 IST
Last Updated 12 ಜುಲೈ 2023, 14:10 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ವಿಲ್ನಿಯಸ್: ನ್ಯಾಟೊದಲ್ಲಿ ಸದಸ್ಯತ್ವ ಪಡೆಯುವ ಉಕ್ರೇನ್‌ನ ಹಾದಿಯನ್ನು ಸರಳಗೊಳಿಸುವ ಸದಸ್ಯರ ರಾಷ್ಟ್ರಗಳ ನಿರ್ಧಾರವನ್ನು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಬುಧವಾರ ಶ್ಲಾಘಿಸಿದರು. ಜತೆಗೆ, ಭದ್ರತೆಗೆ ಸಂಬಂಧಿಸಿದಂತೆ ಹೊಸದಾಗಿ ನೀಡಿರುವ ಖಾತ್ರಿ, ಸೇನಾ ನೆರವಿನ ಭರವಸೆಗೆ ಅವರು ಹರ್ಷ ವ್ಯಕ್ತಪಡಿಸಿದರು.   

‘ನ್ಯಾಟೊ ಶೃಂಗಸಭೆಯಿಂದ ಉತ್ತಮವಾದ ಫಲಿತಾಂಶ ಬಂದಿದೆ. ಆದರೆ, ನ್ಯಾಟೊ ಸೇರಲು ಆಮಂತ್ರಣ ಸಿಕ್ಕಿದ್ದರೆ ಅದು ಸೂಕ್ತವಾಗಿರುತ್ತಿತ್ತು’ ಎಂದು ಅವರು ನ್ಯಾಟೊದ ಮಹಾನಿರ್ದೇಶಕರ ಜತೆಗಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ನ್ಯಾಟೊ ಸೇರುವುದಕ್ಕೂ ಮುನ್ನ, ಔಪಚಾರಿಕ ಸದಸ್ಯತ್ವ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕಾದ ಅಗತ್ಯವನ್ನು ಕೈಬಿಡುವ ಕ್ರಮವನ್ನು ಅವರು ಸ್ವಾಗತಿಸಿದರು. 

ADVERTISEMENT

ಪಾಶ್ಚಾತ್ಯ ರಾಷ್ಟ್ರಗಳಿಗೆ ಯುದ್ಧದ ತೀವ್ರತೆ ಮತ್ತು ವಾಸ್ತವ ಸಂಗತಿಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದು ಇದೇ ವೇಳೆ ಅವರು ಬೇಸರ ವ್ಯಕ್ತಪಡಿಸಿದರು.  

ಉಕ್ರೇನ್‌ಗೆ ಸದಸ್ಯತ್ವ ನೀಡುವ ಪ್ರಕ್ರಿಯೆಯನ್ನು ಯುದ್ಧ ಮುಗಿದ ನಂತರ ತ್ವರಿತಗೊಳಿಸುವ ನಿರ್ಧಾರವನ್ನು ನ್ಯಾಟೊ ಸದಸ್ಯರು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.