
ಪ್ರಜಾವಾಣಿ ವಾರ್ತೆ
ಮಾಸ್ಕೊ: ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರ ಸಮಾಧಿಗೆ ತಾಯಿ ಮತ್ತು ಅತ್ತೆ ಸೇರಿದಂತೆ ಅನೇಕರು ಶನಿವಾರ ಪುಷ್ಪ ನಮನ ಸಲ್ಲಿಸಿದರು.
ಸಮಾಧಿ ಸ್ಥಳದಲ್ಲಿ ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಸ್ಥಳದಲ್ಲಿ ಶಾಂತ ವಾತಾವರಣ ಇತ್ತು ಎಂದು ರಷ್ಯಾದ ಸ್ವತಂತ್ರ ಟಿ.ವಿ ಮಾಧ್ಯಮ ವರದಿ ಮಾಡಿದೆ.
ಎರಡು ವಾರಗಳ ಹಿಂದೆ ಮೃತಪಟ್ಟ ನವಾಲ್ನಿ ಅವರ ಅಂತ್ಯಕ್ರಿಯೆಯು ಶುಕ್ರವಾರ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು. ಕಕ್ಕಿರಿದು ನೆರೆದಿದ್ದ ಜನರು ನವಾಲ್ನಿ ಪರವಾಗಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ದೇಶದಾದ್ಯಂತ ಕನಿಷ್ಠ 106 ಜನರನ್ನ ಬಂಧಿಸಿದ್ದಾರೆ ಎಂದು ಒವಿಡಿ–ಇನ್ಫೊ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.