ADVERTISEMENT

ಹೃದ್ರೋಗ ಸಮಸ್ಯೆ: ಷರೀಫ್‌ ಆಸ್ಪತ್ರೆಗೆ

ಪಿಟಿಐ
Published 1 ಫೆಬ್ರುವರಿ 2019, 20:15 IST
Last Updated 1 ಫೆಬ್ರುವರಿ 2019, 20:15 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಲಾಹೋರ್‌: ಹೃದ್ರೋಗ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಷರೀಫ್‌ ಆರೋಗ್ಯ ತಪಾಸಣೆಗೆ ಜನವರಿ 25ರಂದು ಪಂಜಾಬ್‌ ಪ್ರಾಂತೀಯ ಸರ್ಕಾರ ವೈದ್ಯಕೀಯ ಮಂಡಳಿ ರಚಿಸಿತ್ತು. ಇದರ ಶಿಫಾರಸಿನ ಅನುಸಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಇವರು, ಸದ್ಯ ಲಾಹೋರ್‌ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT