ADVERTISEMENT

ನ.20ಕ್ಕೆ ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ

ಪಿಟಿಐ
Published 7 ನವೆಂಬರ್ 2022, 19:31 IST
Last Updated 7 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ನೇಪಾಳದ ಸಂಸತ್ತು ಹಾಗೂ ಪ್ರಾಂತೀಯ ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ನ.20ರಂದು ಶಾಂತಿಯುತವಾಗಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ದಿನೇಶ್ ಕುಮಾರ್‌ ಥಪಾಲಿಯಾ ತಿಳಿಸಿದ್ಧಾರೆ.

ದೇಶದಾದ್ಯಂತ 7‍ಪ್ರಾಂತ್ಯ ಸೇರಿ ಒಟ್ಟು 1.7 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.275 ಫೆಡರಲ್ ಪಾರ್ಲಿಮೆಂಟ್‌ ಸದಸ್ಯರಲ್ಲಿ 165 ಸದಸ್ಯರು ನೇರ ಮತದಾನದಿಂದ ಆಯ್ಕೆಯಾಗಲಿದ್ದು, ಉಳಿದ 110 ಸ್ಥಾನಗಳಿಗೆ ಅನುಪಾತದ ಆಧಾರದಲ್ಲಿ ಆಯ್ಕೆ ನಡೆಯಲಿದೆ. ಇದೇ ರೀತಿ ಒಟ್ಟಾರೆ 550 ಪ್ರಾಂತೀಯ ಸಭೆಯಲ್ಲಿ 330 ಸ್ಥಾನ ನೇರ ಮತದಾನದ ಮೂಲಕವೂ, 220 ಸ್ಥಾನಕ್ಕೆ ಅನುಪಾತದ ಆಧಾರದಲ್ಲೂ ಆಯ್ಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT