ಕಠ್ಮಂಡು : ನೇಪಾಳದ ರಾಷ್ಟ್ರಪತಿ ಕಚೇರಿ ಶೀತಲ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಹೊಸದಾಗಿ ನೇಮಕಗೊಂಡ ನಾಲ್ವರು ಸಚಿವರು ಸೋಮವಾರ ಅಧಿಕಾರ ಮತ್ತು ಗೋಪ್ಯತಾ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರು ಮಾಜಿ ನ್ಯಾಯಮೂರ್ತಿ ಅನಿಲ್ ಕುಮಾರ್ ಸಿನ್ಹಾ, ರಾಷ್ಟ್ರೀಯ ನಾವೀನ್ಯತೆ ಕೇಂದ್ರದ ಸ್ಥಾಪಕ ಮಹಾಬೀರ್ ಪುನ್, ಪರ್ತಕರ್ತ ಜಗದೀಶ್ ಖರೇಲ್ ಮತ್ತು ತಜ್ಞ ಮದನ್ ಪರಿಯಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನಾಲ್ವರು ನೂತನ ಸಚಿವರ ಸೇರ್ಪಡೆಯೊಂದಿಗೆ ಪ್ರಧಾನಿ ಸುಶಿಲಾ ಕಾರ್ಕಿ ಅವರ ಮಂತ್ರಿಮಂಡಲದ ಬಲ ಎಂಟಕ್ಕೇರಿದೆ. ಆದಾಗ್ಯೂ, ಪ್ರಮುಖ ಖಾತೆಗಳನ್ನು ಪ್ರಧಾನಿ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಸೋಮವಾರ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಭಾನುವಾರ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.