ADVERTISEMENT

ಭಾರತದ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡ ನೇಪಾಳ ಪ್ರಧಾನಿ

ಪಿಟಿಐ
Published 7 ಮಾರ್ಚ್ 2021, 15:19 IST
Last Updated 7 ಮಾರ್ಚ್ 2021, 15:19 IST
ಒಲಿ
ಒಲಿ   

ಕಠ್ಮಂಡು: ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಭಾರತದಲ್ಲಿ ತಯಾರಾದ ಕೋವಿಶೀಲ್ಡ್‌ ಲಸಿಕೆಯನ್ನು ಭಾನುವಾರ ಹಾಕಿಸಿಕೊಂಡಿದ್ದಾರೆ.

69 ವರ್ಷದ ಒಲಿ ಅವರು ಇಲ್ಲಿನ ತ್ರಿಭುವನ್‌ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ಚುಚ್ಚಿಸಿಕೊಂಡರು. ಅವರ ಪತ್ನಿ ರಾಧಿಕಾ ಸಖ್ಯ ಕೂಡ ಲಸಿಕೆ ಹಾಕಿಸಿಕೊಂಡರು.

‘ಕಳೆದ ವರ್ಷ ಮಾರ್ಚ್‌ನಲ್ಲಿ ಒಲಿ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆದಿತ್ತು. ಅಪಾಯ ಹಾಗೂ ಲಸಿಕೆಯ ಉಪಯೋಗಗಳನ್ನು ತಿಳಿದುಕೊಂಡ ನಂತರ ಲಸಿಕೆ ಹಾಕಿಸಿಕೊಳ್ಳುವುದೇ ಉತ್ತಮ ಎಂದು ನಿರ್ಧರಿಸಿದೆವು‘ ಎಂದು ಪ್ರಧಾನಿ ಅವರ ವೈದ್ಯ ಡಾ. ದಿವ್ಯಾ ಸಿಂಗ್‌ ಷಾ ಹೇಳಿದ್ದಾರೆ.

ADVERTISEMENT

ಲಸಿಕೆ ಹಾಕಿಸಿಕೊಂಡ ನಂತರ, ಒಲಿ ಅವರು ‘ದೇಶದ ಎಲ್ಲಾ ಹಿರಿಯ ನಾಗರಿಕರು ಲಸಿಕೆ ಹಾಕಿಸಿಕೊಳ್ಳಿ. ಯಾವುದೇ ಅಡ್ಡಪರಿಣಾಮಗಳಿಲ್ಲ. ಲಸಿಕೆ ಸುರಕ್ಷಿತವಾಗಿದೆ‘ ಎಂದು ಕರೆ ನೀಡಿದ್ದಾರೆ.

ಭಾನುವಾರ ಹಣಕಾಸು ಸಚಿವ ಬಿಷ್ಣು ಪೌಂಡೆಲ್‌, ಆರೋಗ್ಯ ಸಚಿವೆ ಹೃದಯೇಶ್‌ ತ್ರಿಪಾಠಿ ಹಾಗೂ ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗ್ಯಾವಲಿ ಸಹ ಲಸಿಕೆ ಹಾಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.