ADVERTISEMENT

ನೇಪಾಳ: ಸಂಕಷ್ಟದಲ್ಲಿ ಒಲಿ ಸರ್ಕಾರ

ಪಿಟಿಐ
Published 9 ಜುಲೈ 2020, 2:46 IST
Last Updated 9 ಜುಲೈ 2020, 2:46 IST
ಕೆ.ಪಿ.ಶರ್ಮಾ ಒಲಿ
ಕೆ.ಪಿ.ಶರ್ಮಾ ಒಲಿ   

ಕಠ್ಮಂಡು :ಆಡಳಿತಾರೂಢ ಕಮ್ಯೂನಿಸ್ಟ್‌‌ ಪಕ್ಷ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಶೀಘ್ರದಲ್ಲಿಯೇ ವಿಭಜನೆಯಾಗಬಹುದು ಎಂಬ ಸೂಚನೆಯನ್ನುಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೇಳಿದ್ದಾರೆ.

ಪ್ರಧಾನಿ ಹುದ್ದೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ತೀವ್ರ ಒತ್ತಡ ವ್ಯಕ್ತವಾಗಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ತಮ್ಮ ಅಧಿಕೃತ ನಿವಾಸದಲ್ಲಿ ಸಂಪುಟದ ತುರ್ತು ಸಭೆ ನಡೆಸಿದ ಅವರು, ‘ನಮ್ಮ ಪಕ್ಷದ ಕೆಲವು ಸದಸ್ಯರುಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರನ್ನು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ನನ್ನನ್ನು ಮತ್ತು ಪಕ್ಷದ ಅಧ್ಯಕ್ಷೆಯನ್ನು ಹುದ್ದೆಯಿಂದ ಕೆಳಗಿಳಿಸಲು ಪಿತೂರಿ ನಡೆಸಲಾಗುತ್ತಿದೆ. ಆದರೆ, ಅದನ್ನು ಸಾಧ್ಯವಾಗಿಸಲು ಬಿಡುವುದಿಲ್ಲ. ನನಗೆ ಬೆಂಬಲ ವ್ಯಕ್ತಪಡಿಸುತ್ತಿರೋ, ಇಲ್ಲವೋ ಎಂಬ ನಿಲುವನ್ನು ಸಚಿವರು ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಈ ಸಭೆಗೂ ಮೊದಲು ಒಲಿ ಅವರು ಪಕ್ಷದ ಅಧ್ಯಕ್ಷೆ ಭಂಡಾರಿ ಅವರೊಂದಿಗೆ ಮಹಾರಾಜ್‌ಗುಂಜ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.