ADVERTISEMENT

ನೇಪಾಳ: ವಿಚಾರಣೆಗೆ ಸಾಂವಿಧಾನಿಕ ಪೀಠ ರಚಿಸಿದ ಮುಖ್ಯನ್ಯಾಯಮೂರ್ತಿ

ನೇಪಾಳ ಕೆಳಮನೆ ವಿಸರ್ಜನೆ ಪ್ರಶ್ನಿಸಿ 30 ರಿಟ್‌ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2021, 10:30 IST
Last Updated 28 ಮೇ 2021, 10:30 IST
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ   

ಕಠ್ಮಂಡು (ಪಿಟಿಐ): ನೇಪಾಳದ ಸಂಸತ್ತಿನ ಕೆಳಮನೆ (ಜನಪ್ರತಿನಿಧಿಗಳ ಸಭೆ) ವಿಸರ್ಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 30 ರಿಟ್‌ ಅರ್ಜಿಗಳ ವಿಚಾರಣೆಗೆಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಮ್‌ಶೇರ್‌ ರಾಣಾ ಅವರು ಸಾಂವಿಧಾನಿಕ ಪೀಠವನ್ನು ರಚಿಸಿದ್ದು, ಅದಕ್ಕೆ ನಾಲ್ವರು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಿದ್ದಾರೆ.

ಸಾಂವಿಧಾನಿಕ ವಿಷಯಗಳ ಇತ್ಯರ್ಥಕ್ಕೆ ಪೀಠ ರಚಿಸಲು ಅವಕಾಶವಿದೆ. ಆ ಪ್ರಕಾರ ಶುಕ್ರವಾರ ಸಾಂವಿಧಾನಿಕ ಪೀಠವನ್ನು ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬಹುಮತ ಇಲ್ಲದೆ ಇದ್ದರೂ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಶಿಫಾರಸು ಆಧರಿಸಿ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಮೇ 22 ರಂದು ಸಂಸತ್ತಿನ ಕೆಳಮನೆ ವಿಸರ್ಜಿಸಿರುವುದನ್ನು ಪ್ರಶ್ನಿಸಿ ರಿಟ್‌ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.