ಜೆರುಸಲೇಂ: ಮಿಲಿಟರಿ ಸೇವೆಗೆ ಸಂಬಂಧಿಸಿದ ವಿವಾದಿತ ಮಸೂದೆಯನ್ನು ವಿರೋಧಿಸಿ ಯುನೈಟೆಡ್ ತೋರಾ ಜುಡಾಯಿಸಂ (ಯುಟಿಜೆ) ಪಕ್ಷವು ಇಸ್ರೇಲ್‌ನ ಆಡಳಿತಾರೂಢ ಮೈತ್ರಿಕೂಟದಿಂದ ಹೊರಬಂದಿದ್ದು, ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ.
ಯುಟಿಜೆಯ ಆರು ಸದಸ್ಯರು ಸೋಮವಾರ ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ. ನೆತನ್ಯಾಹು ಸರ್ಕಾರ ಇದೀಗ ಸಂಸತ್ತಿನಲ್ಲಿ ಸರಳ ಬಹುಮತವನ್ನಷ್ಟೇ ಹೊಂದಿದೆ. ಯುಟಿಜೆ ಜತೆ ನಿಕಟ ಮೈತ್ರಿ ಹೊಂದಿರುವ ಶಾಸ್ ಪಕ್ಷ ಕೂಡಾ ಬೆಂಬಲ ಹಿಂತೆಗೆದುಕೊಂಡರೆ, ಸರ್ಕಾರ ಪತನಗೊಳ್ಳುವ ಸಾಧ್ಯತೆಯಿದೆ.
ಮಸೂದೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆ ಈಡೇರಿಸಲು ಯುಟಿಜೆ 48 ಗಂಟೆಗಳ ಗಡುವು ನೀಡಿದೆ. ಸದಸ್ಯರ ರಾಜೀನಾಮೆ ನಿರ್ಧಾರ ಆ ಬಳಿಕ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದಿದೆ.
ಹೊಸ ಮಸೂದೆಯು ತೀವ್ರ ಸಂಪ್ರದಾಯವಾದಿ ಯಹೂದಿ ಕುಟುಂಬದ ಮಕ್ಕಳಿಗೆ ಮಿಲಿಟರಿ ಸೇವೆ ಕಡ್ಡಾಯಗೊಳಿಸುತ್ತದೆ. ಯುಟಿಜೆ ಒಳಗೊಂಡಂತೆ ತೀವ್ರ ಸಂಪ್ರದಾಯವಾದಿ ಯಹೂದಿ ಪಕ್ಷಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.