ADVERTISEMENT

ವಿಶ್ವಸಂಸ್ಥೆ | ಯುದ್ಧ ಸಮರ್ಥಿಸಿಕೊಂಡ ನೆತನ್ಯಾಹು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 19:38 IST
Last Updated 26 ಸೆಪ್ಟೆಂಬರ್ 2025, 19:38 IST
<div class="paragraphs"><p>ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು</p></div>

ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು

   

ಎಎಫ್‌ಪಿ ಚಿತ್ರ

ವಿಶ್ವಸಂಸ್ಥೆ: ಗಾಜಾದ ಮೇಲೆ ಸಂಘರ್ಷ ಕೊನೆಗೊಳಿಸಲು ಹೆಚ್ಚುತ್ತಿರುವ ಒತ್ತಡ, ಯುದ್ಧ ಅಪರಾಧದ ಆರೋಪಗಳ ನಡುವೆಯೇ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ADVERTISEMENT

ಕೆಲವು ದಿನಗಳಿಂದ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್‌ ಹಾಗೂ ಬ್ರಿಟನ್‌ ಹಾಗೂ ಇತರೆ ದೇಶಗಳು ಪ್ಯಾಲೆಸ್ಟೀನ್‌ಗೆ ಸ್ವತಂತ್ರ ದೇಶದ ಮಾನ್ಯತೆ ನೀಡುವುದಾಗಿ ಘೋಷಿಸಿದ್ದವು. ಐರೋಪ್ಯ ಒಕ್ಕೂಟವು ಇಸ್ರೇಲ್‌ ಮೇಲೆ ಹೆಚ್ಚಿನ ಸುಂಕ ಹಾಗೂ ನಿರ್ಬಂಧ ವಿಧಿಸುವುದಾಗಿ ಪ್ರಕಟಿಸಿತ್ತು. ಅಂತರರಾಷ್ಟ್ರೀಯ ನ್ಯಾಯಾಲಯವು ಬಂಧನ ವಾರಂಟ್‌ ಹೊರಡಿಸಿತ್ತು.

ಈ ಎಲ್ಲಾ ಬೆಳವಣಿಗೆಯ ಮಧ್ಯದಲ್ಲೇ ಉನ್ನತ ಅಧಿಕಾರಿಗಳ ಜೊತೆ ವಿಮಾನ ಏರಿದ್ದ ನೆತನ್ಯಾಹು ಅವರ ತಂಡವು ನ್ಯೂಯಾರ್ಕ್‌ಗೆ ಬಂದಿಳಿಯಿತು. 

 ‘ನಾನು ನಮ್ಮ ಸತ್ಯವನ್ನೇ ಹೇಳುತ್ತೇನೆ’ ಎಂದು ಮಾತು ಆರಂಭಿಸಿದ ನೆತನ್ಯಾಹು, ಕೊಲೆಗಾರರು, ಅತ್ಯಾಚಾರಿಗಳು, ಮಕ್ಕಳನ್ನು ಸುಡುವವರಿಗೆ ಇಸ್ರೇಲ್‌ನ ಹೃದಯಭಾಗದಲ್ಲಿ ದೇಶ ನೀಡಲು ಬಯಸುತ್ತಿರುವ ನಿರ್ಧಾರವನ್ನು ಖಂಡಿಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.