ADVERTISEMENT

ಧ್ವನಿ ಮೂಲಕ ಕೋವಿಡ್‌ ಸೋಂಕು ಪತ್ತೆ ಮಾಡುವ ಆ್ಯಪ್‌ ಅಭಿವೃದ್ಧಿ

ಪಿಟಿಐ
Published 5 ಸೆಪ್ಟೆಂಬರ್ 2022, 15:50 IST
Last Updated 5 ಸೆಪ್ಟೆಂಬರ್ 2022, 15:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಕೃತಕ ಬುದ್ಧಿಮತ್ತೆಯ ಮೂಲಕ ವ್ಯಕ್ತಿಯ ಧ್ವನಿಯನ್ನುವಿಶ್ಲೇಷಿಸಿ, ಕೋವಿಡ್‌ ಸೋಂಕನ್ನು ನಿಖರವಾಗಿ ಪತ್ತೆ ಮಾಡುವ ಸ್ಮಾರ್ಟ್‌ಫೋನ್‌ ಆ್ಯಪ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

‘ರ‍್ಯಾಪಿಡ್‌ ಆ್ಯಂಟಿಜೆನ್‌ ಅಥವಾ ಲ್ಯಾಟರಲ್‌ ಫ್ಲೋ ಪರೀಕ್ಷೆಗಿಂತಲೂ ನಿಖರವಾಗಿ ಇದರಲ್ಲಿ ಸೋಂಕನ್ನು ಪತ್ತೆ ಹಚ್ಚಬಹುದು. ಅತ್ಯಂತ ಕಡಿಮೆ ಬೆಲೆಯಲ್ಲಿ, ವೇಗವಾಗಿ ಮತ್ತು ಸುಲಭವಾಗಿ ಬಳಕೆ ಮಾಡಬಹುದು.ಪಿಸಿಆರ್‌ ಪರೀಕ್ಷೆ ದುಬಾರಿ ಎನಿಸುವ ಕಡಿಮೆ ಆದಾಯವಿರುವ ದೇಶಗಳು ಈ ತಂತ್ರಜ್ಞಾನವನ್ನು ಬಳಕೆ ಮಾಡಬಹುದು’ ಎಂದು ಸಂಶೋಧಕರು ತಿಳಿಸಿದ್ದಾರೆ.

ಬಳಕೆ ಹೇಗೆ?
ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಬಳಿಕ ತಮ್ಮ ಸ್ವವಿವರ, ವೈದ್ಯಕೀಯ ಇತಿಹಾಸ, ಧೂಮಪಾನ ಅಭ್ಯಾಸದ ಬಗ್ಗೆ ಮಾಹಿತಿ ನೀಡಬೇಕು. ಬಳಿಕ ಕೆಮ್ಮಿದಾಗ ಬರುವ ಶಬ್ದ, ಬಾಯಿಯಿಂದ ಉಸಿರಾಡಿದಾಗ ಬರುವ ಶಬ್ದ ಸೇರಿ ಮತ್ತಿತರ ಧ್ವನಿಗಳನ್ನು ರೆಕಾರ್ಡ್‌ ಮಾಡಲು ಹೇಳಲಾಗುತ್ತದೆ. ಬಳಿಕ ಆ್ಯಪ್ ಫಲಿತಾಂಶ ನೀಡುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.