ADVERTISEMENT

ಕ್ಯಾಥಿ ಹೋಚಲ್‌: ನ್ಯೂಯಾರ್ಕ್‌ನ ಪ್ರಥಮ ಮಹಿಳಾ ಗವರ್ನರ್‌

ಏಜೆನ್ಸೀಸ್
Published 24 ಆಗಸ್ಟ್ 2021, 5:30 IST
Last Updated 24 ಆಗಸ್ಟ್ 2021, 5:30 IST
ನ್ಯೂಯಾರ್ಕ್‌ನ ಪ್ರಥಮ ಮಹಿಳಾ ಗವರ್ನರ್‌ ಕ್ಯಾಥಿ ಹೋಚಲ್‌ ಅವರು ಪ್ರಮಾಣ ವಚನ ಕಾರ್ಯಕ್ರಮದ ವೇಳೆ ದಾಖಲೆಗಳಿಗೆ ಸಹಿ ಹಾಕಿದರು                             –ರಾಯಿಟರ್ಸ್‌ ಚಿತ್ರ
ನ್ಯೂಯಾರ್ಕ್‌ನ ಪ್ರಥಮ ಮಹಿಳಾ ಗವರ್ನರ್‌ ಕ್ಯಾಥಿ ಹೋಚಲ್‌ ಅವರು ಪ್ರಮಾಣ ವಚನ ಕಾರ್ಯಕ್ರಮದ ವೇಳೆ ದಾಖಲೆಗಳಿಗೆ ಸಹಿ ಹಾಕಿದರು                             –ರಾಯಿಟರ್ಸ್‌ ಚಿತ್ರ   

ಅಲ್ಬನಿ/ನ್ಯೂಯಾರ್ಕ್‌: ನ್ಯೂಯಾರ್ಕ್‌ ರಾಜ್ಯದ ನೂತನ ಮಹಿಳಾ ಗವರ್ನರ್ ಆಗಿ ಕ್ಯಾಥಿ ಹೋಚಲ್‌ ಅವರು ಆಯ್ಕೆಯಾಗಿದ್ದಾರೆ.

ಲೈಂಗಿಕ ದೌರ್ಜ್ಯನದ ಆರೋಪ ಎದುರಿಸುತ್ತಿರುವ ಅನ್‌ಡ್ರಿವ್ ಎಂ.ಕ್ಯೂಮೊ ಅವರು ಗವರ್ನರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕ್ಯಾಥಿ ಹೋಚಲ್‌ ಅವರನ್ನು ನೇಮಿಸಲಾಗಿದೆ.

ರಾಜ್ಯದ ಮುಖ್ಯ ನ್ಯಾಯಮೂರ್ತಿಯಾದ ಜಾನೆಟ್‌ ಡಿಫಿಯಾರೆ ಅವರ ಸಮ್ಮುಖದಲ್ಲಿ ಖಾಸಗಿ ಸಮಾರಂಭದಲ್ಲಿ ಡೆಮಾಕ್ರಾಟ್‌ ಕ್ಯಾಥಿ ಹೋಚಲ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ಸವಾಲು:ಕ್ಯಾಥಿ ಅವರ ಮುಂದೆ ಹಲವು ಸವಾಲುಗಳಿವೆ. ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜೂನ್‌ ತಿಂಗಳಿನಿಂದ 1,370 ಹೊಸ ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗಳು ತುಂಬುತ್ತಿವೆ.

ಒಂದು ವೇಳೆ ರಾಜ್ಯದಲ್ಲಿ ಸೋಂಕು ಇನ್ನಷ್ಟು ತೀವ್ರಗೊಂಡರೆ ಕಡ್ಡಾಯ ಮಾಸ್ಕ್‌ ಧರಿಸುವಿಕೆ, ಅಂತರ ಕಾಪಾಡುವ ನಿಯಮಗಳನ್ನು ಹೇರುವ ಕುರಿತಾದ ನಿರ್ಧಾರಗಳನ್ನು ಕ್ಯಾಥಿ ಕೈಗೊಳ್ಳಬೇಕಾಗುತ್ತದೆ.ಆರ್ಥಿಕತೆಯು ಅಸ್ಥಿರವಾಗಿಯೇ ಉಳಿದಿದೆ. ಎರಡು ವರ್ಷಗಳಲ್ಲಿ ನಿರುದ್ಯೋಗವು ದುಪ್ಪಟ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.