ADVERTISEMENT

'ಹವಾಮಾನ ತುರ್ತು ಪರಿಸ್ಥಿತಿ' ನಿರ್ಣಯ ಕೈಗೊಂಡ ನ್ಯೂಜಿಲೆಂಡ್ ಸರ್ಕಾರ

ಏಜೆನ್ಸೀಸ್
Published 2 ಡಿಸೆಂಬರ್ 2020, 8:03 IST
Last Updated 2 ಡಿಸೆಂಬರ್ 2020, 8:03 IST
ಜೆಸಿಂಡಾ ಅರ್ಡೆನ್‌
ಜೆಸಿಂಡಾ ಅರ್ಡೆನ್‌   

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಸರ್ಕಾರ ಬುಧವಾರ ಸಾಂಕೇತಿಕವಾಗಿ ‘ಹವಾಮಾನ ತುರ್ತುಪರಿಸ್ಥಿತಿ‘ ಘೋಷಣೆಯ ನಿರ್ಣಯ ಕೈಗೊಂಡಿತು.

ಸರ್ಕಾರ ಕೈಗೊಂಡ ಈ ನಿರ್ಣಯದ ಪರವಾಗಿ 76 ಶಾಸಕರು ಮತ ಚಲಾಯಿಸಿದರು. 76–43 ಮತಗಳಿಂದ ಈ ನಿರ್ಣಯ ಅಂಗೀಕಾರವಾಗಿದೆ.

ಕಲ್ಲಿದ್ದಲು ಬಾಯ್ಲರ್‌ಗಳನ್ನು ನಿಷೇಧ, ಎಲೆಕ್ಟ್ರಿಕ್ ಕಾರುಗಳ ಖರೀದಿಗಳಂತಹ ಉಪಕ್ರಮಗಳ ಮೂಲಕ ಸಾರ್ವಜನಿಕ ಸಂಸ್ಥೆಗಳು 2025ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ತಟಸ್ಥಗೊಳಿಸುಂತಹ ಪ್ರಯತ್ನಗಳನ್ನು ಸರ್ಕಾರ ಆರಂಭಿಸಿದೆ.

ADVERTISEMENT

ಈಗಾಗಲೇ ಜಪಾನ್‌, ಕೆನಡಾ, ಫ್ರಾನ್ಸ್‌ ಮತ್ತು ಬ್ರಿಟನ್‌ ಸೇರಿದಂತೆ 30 ಕ್ಕೂ ಹೆಚ್ಚು ರಾಷ್ಟ್ರಗಳು ‘ಹವಾಮಾನ ತುರ್ತು ಪರಿಸ್ಥಿತಿ‘ ಘೋಷಿಸಿವೆ. ಈ ಸಾಂಕೇತಿಕ ಘೋಷಣೆಯ ನಿರ್ಣಯ ಕೈಗೊಳ್ಳುವ ಮೂಲಕ ಆ ರಾಷ್ಟ್ರಗಳ ಜತೆಗೆ ನ್ಯೂಜಿಲೆಂಡ್‌ ಕೂಡ ಸೇರಿಕೊಂಡಿದೆ.

ಸಾಮಾನ್ಯವಾಗಿ ನೈಸರ್ಗಿಕ ವಿಪತ್ತುಗಳಂತಹ ವಿಚಾರದಲ್ಲಿ ಮಾತ್ರ ಸರ್ಕಾರಗಳು ‘ತುರ್ತು ಪರಿಸ್ಥಿತಿ‘ ಘೋಷಿಸುತ್ತವೆ. ಆದರೆ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸದಿದ್ದರೆ, ನಿಸರ್ಗ ವಿಪತ್ತುಗಳು ಸಂಭವಿಸುತ್ತಲೇ ಇರುತ್ತವೆ ಎಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡೆನ್ ಹೇಳಿದರು.

‘ಈ ಹವಾಮಾನ ತುರ್ತುಪರಿಸ್ಥಿತಿ ಘೋಷಣೆ ಮುಂದಿನ ಪೀಳಿಗೆಯವರು ಎದುರಿಸಲಿರುವ ಪಾರಿಸಾರಿಕ ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರವಾಗುತ್ತದೆ‘ ಎಂದು ಜೆಸಿಂಡಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.