ADVERTISEMENT

ಭಾರತದ ನೆರವಿಗಾಗಿ ರೆಡ್‌ಕ್ರಾಸ್‌ಗೆ ₹5 ಕೋಟಿ ದೇಣಿಗೆ: ನ್ಯೂಜಿಲೆಂಡ್‌

ಪಿಟಿಐ
Published 28 ಏಪ್ರಿಲ್ 2021, 9:51 IST
Last Updated 28 ಏಪ್ರಿಲ್ 2021, 9:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೆಲ್ಬರ್ನ್‌/ವೆಲ್ಲಿಂಗ್ಟನ್‌: ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವ ಸಲುವಾಗಿ ರೆಡ್‌ ಕ್ರಾಸ್‌ ಸಂಸ್ಥೆಗೆ ₹ 5 ಕೋಟಿ (ಹತ್ತುಲಕ್ಷ ನ್ಯೂಜೆಲೆಂಡ್‌ ಡಾಲರ್‌) ನೀಡುವುದಾಗಿ ನ್ಯೂಜಿಲೆಂಡ್‌ ಘೋಷಿಸಿದೆ.

‘ಇಂಥ ಸಂಕಷ್ಟದ ಸಮಯದಲ್ಲಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಈ ಪಿಡುಗಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತರ ಕಾರ್ಯ ಶ್ಲಾಘನೀಯ’ ಎಂದು ನ್ಯೂಜಿಲೆಂಡ್‌ನ ವಿದೇಶಾಂಗ ಸಚಿವೆ ನ್ಯಾನಿಯಾ ಮಹುತಾ ಬುಧವಾರ ಹೇಳಿದರು.

‘ರೆಡ್‌ಕ್ರಾಸ್‌ ಸಂಸ್ಥೆ ಸಂಕಷ್ಟದಲ್ಲಿರುವ ದೇಶಗಳಿಗೆ ನೆರವು ನೀಡುವ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು, ತನ್ನ ಕಾರ್ಯಗಳಿಗಾಗಿ ಅದು ಜಾಗತಿಕ ಮನ್ನಣೆಯನ್ನೂ ಪಡೆದಿದೆ. ಹೀಗಾಗಿ ಸಂಘಟನೆಗೆ ದೇಣಿಗೆ ನೀಡುವ ಮೂಲಕ ಭಾರತಕ್ಕೆ ನಾವು ನಿಜವಾದ ನೆರವು ನೀಡಬಹುದಾಗಿದೆ’ ಎಂಬ ಮಹುತಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಜಿಲೆಂಡ್‌ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.