ವೆಲ್ಲಿಂಗ್ಟನ್: ತನ್ನ ಪ್ರಜೆಗಳು ಜನವರಿಯಿಂದ ಸ್ವದೇಶಕ್ಕೆ ಮರಳಲು ಅನುಮತಿ ನೀಡಲಾಗಿದೆ ಎಂದು ನ್ಯೂಜಿಲೆಂಡ್ ಸರ್ಕಾರ ಬುಧವಾರ ಘೋಷಿಸಿದೆ.ಅಲ್ಲದೇ, ವಿದೇಶಿ ಪ್ರವಾಸಿಗರು ಏಪ್ರಿಲ್‌ನಿಂದ ನ್ಯೂಜಿಲೆಂಡ್‌ಗೆ ಭೇಟಿ ನೀಡಬಹುದು ಎಂದೂ ಸರ್ಕಾರ ಹೇಳಿದೆ.
ಕೋವಿಡ್–19 ಪಿಡುಗು ಆರಂಭವಾದಾಗಿನಿಂದ ಅಂತರರಾಷ್ಡ್ರೀಯ ಪ್ರಯಾಣಕ್ಕೆ ಸಂಬಂಧಿಸಿ ನ್ಯೂಜಿಲೆಂಡ್ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿತ್ತು. ತನ್ನ ಪ್ರಜೆಗಳು ವಿದೇಶಗಳಿಂದ ಮರಳಿದ ನಂತರ ಕಡ್ಡಾಯವಾಗಿ ಎರಡು ವಾರಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿತ್ತು.
ಇಂಥ ಕಠಿಣ ನಿರ್ಬಂಧಗಳ ಕಾರಣಗಳಿಂದಾಗಿ, ಕೋವಿಡ್ ಪಿಡುಗು ಕಾಣಿಸಿಕೊಂಡ ನಂತರ ಮೊದಲ 18 ತಿಂಗಳ ಅವಧಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ಕೊರೊನಾ ವೈರಸ್‌ನ ಒಂದೂ ಪ್ರಕರಣ ವರದಿಯಾಗಿರಲಿಲ್ಲ ಎಂಬುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.