( ರಾಯಿಟರ್ಸ್ ಚಿತ್ರ)
ಟೆಹರಾನ್‌ನಲ್ಲಿ ನಾಗರಿಕರ ಸ್ಥಳಾಂತರಕ್ಕೆ ಎಚ್ಚರಿಕೆ ನೀಡಿದ್ದ ಇಸ್ರೇಲ್, ಅದರ ಬೆನ್ನಲ್ಲೇ ಇರಾನ್‌ನ ರಾಷ್ಟ್ರೀಯ ಸುದ್ದಿವಾಹಿನಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್ ಕಚೇರಿ ಮೇಲೆ ದಾಳಿ ನಡೆಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಮತ್ತು ಎಪಿ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಇರಾನ್– ಇಸ್ರೇಲ್ ಮಧ್ಯದ ಯುದ್ಧದ ಕುರಿತ ನೇರಪ್ರಸಾರ ಮಾಡುತ್ತಿರುವಾಗಲೇ ಸುದ್ದಿವಾಹಿನಿ ಕಚೇರಿ ಬಳಿ ಭಾರಿ ಸ್ಫೋಟದ ಸದ್ದು ಕೇಳಿಬಂತು. ನೇರಪ್ರಸಾರದ ಮಧ್ಯೆಯೇ ವಾಹಿನಿಯ ಸ್ಟುಡಿಯೊ ಕಟ್ಟಡದ ಅವಶೇಷಗಳು ಮತ್ತು ದೂಳಿನಿಂದ ಆವೃತವಾಯಿತು.
ವಾಹಿನಿಯ ನಿರೂಪಕರು ತಕ್ಷಣವೇ ಕ್ಯಾಮೆರಾಗಳನ್ನು ಆಫ್ ಮಾಡಿದರು. ಸ್ಥಳದಲ್ಲಿದ್ದವರು, ‘ಅಲ್ಲಾಹು ಅಕ್ಬರ್’ ಎಂದು ಆತಂಕದಲ್ಲಿ ಹೇಳುತ್ತಿದ್ದುದು ಕೇಳಿಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.