ನಿಕೋಲಸ್ ಮಡುರೊ
ಕಾರ್‌ಕಸ್: ಚುನಾವಣೆ ಆಕ್ರಮಗಳ ವಿವಾದದ ನಡುವೆಯೂ ವೆನಿಜುವೆಲಾದ ಅಧ್ಯಕ್ಷರಾಗಿ ನಿಕೋಲಸ್ ಮಡುರೊ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದರು.
ನಿಕೋಲಸ್ ಮಡುರೊ ಅವರು ಮೂರನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ವಿಶೇಷ. ಇವರ ಅವಧಿ ಮುಂದಿನ 6 ವರ್ಷಗಳವರೆಗೆ ಇರಲಿದೆ.
ಕಳೆದ ಜುಲೈ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೋಲಸ್ ಮಡುರೊ ಶೇಕಡ 51 ರಷ್ಟು ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಎಲ್ವಿಸ್ ಅಮೊರೊಸೊ ಘೊಷಣೆ ಮಾಡಿದ್ದರು. ವಿರೋಧ ಪಕ್ಷದ ನಾಯಕ ಜೌನ್ ಗೈಡೊ ಶೇಕಡ 44 ರಷ್ಟುಗಳಿಸಿ ಪರಾಭವಗೊಂಡಿದ್ದಾರೆ ಎಂದು ಪ್ರಕಟಿಸಿದ್ದರು.
ಈ ಘೋಷಣೆ ಬಳಿಕ ಜೌನ್ ಗೈಡೊ ಅವರು ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ವ್ಯಾಪಕ ಆಕ್ರಮವಾಗಿದ್ದು ವಿದೇಶಿ ನಾಯಕರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.