ADVERTISEMENT

ಸಿಡ್ನಿಯಲ್ಲಿ ಚಾಕು ಇರಿತ: ಧಾರ್ಮಿಕ ಉಗ್ರವಾದದಿಂದ ಪ್ರೇರಿತವಾದ ಕೃತ್ಯ– ಪೊಲೀಸರು

ಏಜೆನ್ಸೀಸ್
Published 16 ಏಪ್ರಿಲ್ 2024, 2:28 IST
Last Updated 16 ಏಪ್ರಿಲ್ 2024, 2:28 IST
<div class="paragraphs"><p>ಪೊಲೀಸರು</p></div>

ಪೊಲೀಸರು

   

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಚರ್ಚ್‌ ಒಂದರಲ್ಲಿ ಸೋಮವಾರ ವ್ಯಕ್ತಿಯೊಬ್ಬ ನಾಲ್ವರಿಗೆ ಚೂರಿಯಿಂದ ಇರಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಈ ಘಟನೆ ಧಾರ್ಮಿಕ ಉಗ್ರವಾದದಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯವಾಗಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾರೆ.

ADVERTISEMENT

ಚರ್ಚ್‌ನಲ್ಲಿ ನಡೆದ ಚೂರಿ ಇರಿತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ, ಇದು ಧಾರ್ಮಿಕ ಉಗ್ರವಾದದಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಶಂಕಿತ ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಬಹಿರಂಗಪಡಿಸಿಲ್ಲ.

ಸಿಡ್ನಿಯ ಹೊರವಲಯದಲ್ಲಿರುವ ವಾಕ್ಲೆಯ ‘ಕ್ರಿಸ್ಟ್‌ ದಿ ಗುಡ್‌ ಶೆಫರ್ಡ್‌ ಚರ್ಚ್‌’ನಲ್ಲಿ ಈ ಘಟನೆ ನಡೆದಿದೆ. ಚರ್ಚ್‌ನಲ್ಲಿ ಇದ್ದವರಿಗೆ ಆರೋಪಿಯು ಚೂರಿಯಿಂದ ಇರಿಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಕಳೆದ ಶನಿವಾರ ಸಿಡ್ನಿಯ ಮಾಲ್‌ನಲ್ಲಿ ಚೂರಿಯಿಂದ ದಾಳಿ ಮಾಡಿ 6 ಜನರನ್ನು ಹತ್ಯೆ ಮಾಡಲಾಗಿತ್ತು. ಮೂರು ದಿನಗಳ ಅಂತರದಲ್ಲೇ ಚರ್ಚ್‌ನಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.