ADVERTISEMENT

ಸಾಲದ ಹೊರೆ: ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷರ ವಿರುದ್ಧ ನಿಕ್ಕಿ ಹ್ಯಾಲೆ ತರಾಟೆ

ಪಿಟಿಐ
Published 5 ಮಾರ್ಚ್ 2023, 13:25 IST
Last Updated 5 ಮಾರ್ಚ್ 2023, 13:25 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್‌: ಅಮೆರಿಕದ ಸಾಲದ ಹೊರೆ ಏರಲು ಮಾಜಿ ಅಧ್ಯಕ್ಷರಾದ, ರಿಪಬ್ಲಿಕನ್‌ ಪಕ್ಷದ ಜಾರ್ಜ್ ಡಬ್ಲ್ಯು ಬುಷ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲಿ ಆದ ದುಂದುವೆಚ್ಚವೂ ಕಾರಣ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಈ ಇಬ್ಬರ ಆಡಳಿತ ಅವಧಿಯಲ್ಲಿ ಆಗ ದುಂದುವೆಚ್ಚದಿಂದಾಗಿ ದೇಶದ ಮೇಲೆ ಸುಮಾರು 10 ಟ್ರಿಲಿಯನ್‌ ಡಾಲರ್‌ನಷ್ಟು ಸಾಲದ ಹೊರೆ ಬಿದ್ದಿದೆ ಎಂದು ಅವರು ಸ್ವಪಕ್ಷದ ನಾಯಕರನ್ನೇ ತರಾಟೆಗೆ ತೆಗೆದುಕೊಂಡರು.

‘ತಾವು 2010ರಲ್ಲಿ ನಾರ್ತ್ ಕರೊಲಿನಾ ಗವರ್ನರ್‌ ಆಗಿದ್ದ ಅವಧಿಯಲ್ಲಿ ದೇಶದ ಸಾಲ 13 ಟ್ರಿಲಿಯನ್‌ ಡಾಲರ್‌ ಇತ್ತು. 13 ವರ್ಷಗಳ ನಂತರ 31 ಟ್ರಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಾಗಿದೆ. ಈಗ ಜೋ ಬೈಡನ್‌ ಅವಧಿಯಲ್ಲೂ ದಾಖಲೆ ಪ್ರಮಾಣದಲ್ಲಿ ವೆಚ್ಚವಾಗುತ್ತಿದೆ. ಮುಂದಿನ 10 ವರ್ಷದಲ್ಲಿ ಸಾಲದ ಹೊರೆ 20 ಟ್ರಿಲಿಯನ್‌ ಡಾಲರ್‌ಗೆ ತಲುಪಬಹುದು’ ಎಂದು ಟೀಕಿಸಿದರು.

ADVERTISEMENT

‘ರಿಪಬ್ಲಿಕನ್ ಪಕ್ಷದ ರಾಜಕಾರಣಿಗಳೂ ಸಹ ವೆಚ್ಚ ಪ್ರಿಯರಾಗಿದ್ದರು, ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದರು’ ಎಂದು ಜಾರ್ಜ್‌ ಡಬ್ಲ್ಯು ಬುಷ್‌ ಮತ್ತು ಟ್ರಂಪ್ ಅವರನ್ನು ನಿಕ್ಕಿ ಹ್ಯಾಲೆ ಪರೋಕ್ಷವಾಗಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.