ADVERTISEMENT

ಇರಾನ್‌: ಪೊಲೀಸ್‌ ಠಾಣೆ ಮೇಲೆ ಪ್ರತ್ಯೇಕತಾವಾದಿ ಗುಂಪಿನ ದಾಳಿ– 19 ಮಂದಿ ಸಾವು

ಏಜೆನ್ಸೀಸ್
Published 1 ಅಕ್ಟೋಬರ್ 2022, 14:16 IST
Last Updated 1 ಅಕ್ಟೋಬರ್ 2022, 14:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಶಸ್ತ್ರಸಜ್ಜಿತ ಪ್ರತ್ಯೇಕತಾವಾದಿ ಗುಂಪು ಇರಾನ್‌ನ ಜಹೇದನ್‌ ನಗರದ ಪೊಲೀಸ್‌ ಠಾಣೆಯ ಮೇಲೆ ನಡೆಸಿದ ದಾಳಿಯಲ್ಲಿ ಎಲೈಟ್‌ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ನ ಮೂವರು ಸದಸ್ಯರು ಸೇರಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿಸಂಸ್ಥೆಯಾದ ಐಆರ್‌ಎನ್‌ಎ ಶನಿವಾರ ವರದಿ ಮಾಡಿದೆ.

ದಾಳಿಯಲ್ಲಿ ಗಾರ್ಡ್‌ನ32 ಮಂದಿ ಗಾಯಗೊಂಡಿದ್ದಾರೆ ಎಂದು ಅದು ತಿಳಿಸಿದೆ. ಈ ದಾಳಿಯು, ಪೊಲೀಸ್‌ ವಶದಲ್ಲಿದ್ದ ಯುವತಿಯ ಸಾವಿನ ನಂತರ ಉಂಟಾದ ಸರ್ಕಾರ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದ್ದೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.

ಹಿಜಾಬ್‌ ಅನ್ನು ಸರಿಯಾಗಿ ಧರಿಸಿರಲಿಲ್ಲ ಎಂಬ ಕಾರಣಕ್ಕೆ 22 ವರ್ಷದ ಯುವತಿ ಮಹಸಾ ಅಮೀನಿ ಅವರನ್ನು ಇರಾನಿನ ನೈತಿಕ ಪೊಲೀಸರು ಸೆ.13ರಂದು ಬಂಧಿಸಿದ್ದರು. ಬಂಧನದ ಮೂರು ದಿನಗಳಲ್ಲಿ ಅಮೀನಿ ಅವರು ಮೃತಪಟ್ಟಿದ್ದರು. ಇದರ ವಿರುದ್ಧ ಆರಂಭವಾದ ಪ್ರತಿಭಟನೆಯಲ್ಲಿಕನಿಷ್ಠ 41 ಮಂದಿ ಪ್ರತಿಭಟನಕಾರರು ಮತ್ತು ಪೊಲೀಸರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.