ADVERTISEMENT

ನೀರವ್‌ ಮೋದಿ ಹಸ್ತಾಂತರ: ವಿಚಾರಣೆ ಆರಂಭ

ಪಿಟಿಐ
Published 11 ಮೇ 2020, 19:30 IST
Last Updated 11 ಮೇ 2020, 19:30 IST
ನೀರವ್‌ ಮೋದಿ
ನೀರವ್‌ ಮೋದಿ   

ಲಂಡನ್: ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ವಿಚಾರಣೆ ಇಲ್ಲಿನ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.

ಸದ್ಯ, ಲಂಡನ್‌ನ ವಾಂಡ್ಸ್‌ವರ್ಥ್‌ ಕಾರಾಗೃಹದಲ್ಲಿರುವ ನೀರವ್‌ ಮೋದಿ, ಲಾಕ್‌ಡೌನ್‌ ಇರುವುದರಿಂದ ವಿಡಿಯೊ ಲಿಂಕ್‌ ಮೂಲಕ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರಾದರು.

ADVERTISEMENT

'ಈ ಪ್ರಕರಣದಲ್ಲಿ ಹೆಚ್ಚು ಗೊಂದಲಗಳಿಲ್ಲ. ಅಪಾರ ಮೊತ್ತದ ವಂಚನೆ, ಅಕ್ರಮ ಹಣ ವರ್ಗಾವಣೆ ನಡೆದಿದೆ’ ಎಂದು ಭಾರತದ ತನಿಖಾ ಸಂಸ್ಥೆಗಳ ಪರ ಹಾಜರಿದ್ದ ವಕೀಲರಾದ ಹೆಲೆನ್‌ ಮಾಲ್ಕಾಲ್ಮ್‌ ವಾದ ಮಂಡಿಸಿದರು.

ಸೋಮವಾರದಿಂದ ದಿನಗಳ ಕಾಲ ವಿಚಾರಣೆ ನಡೆಯಲಿದೆ. ಮೋದಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿವೆ.

ಖುದ್ದು ಹಾಜರಾತಿ ಬದಲು ವಿಡಿಯೊ ಲಿಂಕ್‌ ಮೂಲಕವೇ ಹಾಜರಾಗಲು ನ್ಯಾಯಾಧೀಶರು ಸಮ್ಮತಿ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.