ADVERTISEMENT

ಗಡಿಪಾರು ಅದೇಶದ ವಿರುದ್ಧ ಮೇಲ್ಮನವಿ: ಅನುಮತಿ ಕೋರಿ ನೀರವ್‌ ಮೋದಿ ಅರ್ಜಿ

ಪಿಟಿಐ
Published 24 ನವೆಂಬರ್ 2022, 10:35 IST
Last Updated 24 ನವೆಂಬರ್ 2022, 10:35 IST
ನೀರವ್‌ ಮೋದಿ
ನೀರವ್‌ ಮೋದಿ   

ಲಂಡನ್: ಭಾರತದ ವಜ್ರದ ಉದ್ಯಮಿ51 ವರ್ಷದ ನೀರವ್‌ ಮೋದಿ, ಸುಪ್ರೀಂ ಕೋರ್ಟ್‌ ತಮ್ಮ ವಿರುದ್ಧ ನೀಡಿರುವ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅನುಮತಿ ಕೋರಿ ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಾನಸಿಕ ಆರೋಗ್ಯ ಸ್ಥಿತಿ ಆಧಾರದಲ್ಲಿ ನೀರವ್‌ ಮೋದಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಈ ತಿಂಗಳ ಆರಂಭದಲ್ಲಿ ತಿರಸ್ಕರಿಸಿತ್ತು. ಮಾನಸಿಕ ಆರೋಗ್ಯ ಸ್ಥಿತಿ ಕಳವಳ ಪಡುವ ಸ್ಥಿತಿಯಲ್ಲಿ ಇಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) 16 ಸಾವಿರ ಕೋಟಿ ಸಾಲ ಹಗರಣದ ವಿಚಾರಣೆ ಎದುರಿಸಲು ಗಡೀಪಾರು ಜಾರಿಗೊಳಿಸಬಹುದು ಎಂದು ಹೇಳಿತ್ತು.

ಸದ್ಯ, ಕಾರಾಗೃಹದಲ್ಲಿರುವ ನೀರವ್ ಮೇಲ್ಮನವಿ ಸಲ್ಲಿಸಲು ಎರಡು ವಾರ ಸಮಯ ಹೊಂದಿದ್ದಾರೆ. ಕಾನೂನು ಹೋರಾಟದ ಆಯ್ಕೆ ಮುಕ್ತವಾಗಿದ್ದು, ಗಡಿಪಾರು ಕ್ರಮ ಎಂದು ಜಾರಿಯಾಗಲಿದೆ ಎಂದು ಹೇಳಲಾಗದು ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.