ADVERTISEMENT

‘ಆರ್ಡರ್‌ ಆಫ್ ಮೆರಿಟ್‌’ ಪ್ರಶಸ್ತಿಗೆ ವೆಂಕಿ ರಾಮಕೃಷ್ಣನ್‌ ಭಾಜನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 14:38 IST
Last Updated 12 ನವೆಂಬರ್ 2022, 14:38 IST
ನೊಬೆಲ್‌ ಪುರಸ್ಕೃತ ವೆಂಕಿ ರಾಮಕೃಷ್ಣನ್‌
ನೊಬೆಲ್‌ ಪುರಸ್ಕೃತ ವೆಂಕಿ ರಾಮಕೃಷ್ಣನ್‌   

ಲಂಡನ್‌ (ಪಿಟಿಐ): ಭಾರತೀಯ ಮೂಲದ ನೊಬೆಲ್‌ ಪುರಸ್ಕೃತ ಪ್ರೊ. ವೆಂಕಿ ರಾಮಕೃಷ್ಣನ್‌ ಅವರು ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಬ್ರಿಟನ್ನಿನ ‘ಆರ್ಡರ್‌ ಆಫ್ ಮೆರಿಟ್‌’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಪ್ರೊ. ವೆಂಕಿ ರಾಮಕೃಷ್ಣನ್‌ ಅವರುತಮಿಳುನಾಡಿನ ಚಿದಂಬರಂ ಮೂಲದವರು. ಅಮೆರಿಕದಲ್ಲಿ ಜೀವ ವಿಜ್ಞಾನವನ್ನು ಅಧ್ಯಯನ ಮಾಡಿದರು. ನಂತರ ಬ್ರಿಟನ್‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರವಾದ ಎಂಆರ್‌ಸಿ ಪ್ರಯೋಗಾಲಯದ ಅಣು ಜೀವ ವಿಜ್ಞಾನಿಗಳ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2009ರಲ್ಲಿ ನೊಬೆಲ್‌ ಪುರಸ್ಕೃತರಾದ ಇವರು ಇಂಗ್ಲೆಂಡಿನ ರಾಯಲ್‌ ಸೊಸೈಟಿಯ ಅಧ್ಯಕ್ಷರಾಗಿ 2015 ರಿಂದ 2020 ರವೆರೆಗೆ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.