

ಸೋಲ್: ಉತ್ತರ ಕೊರಿಯಾ ಕ್ಷಿಪಣಿಯೊಂದನ್ನು ತನ್ನ ಪೂರ್ವ ಕರಾವಳಿಯಲ್ಲಿ ಉಡಾವಣೆ ಮಾಡಿದೆ. ಇದು ಪರೀಕ್ಷಾರ್ಥ ಶಸ್ತ್ರಾಸ್ತ್ರ ಪ್ರಯೋಗ ಇರಬಹುದು ಎಂದು ದಕ್ಷಿಣ ಕೊರಿಯಾ ಮಂಗಳವಾರ ಶಂಕೆ ವ್ಯಕ್ತಪಡಿಸಿದೆ.
ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದ್ದು, ಅದು ಶಸ್ತ್ರಾಸ್ತ್ರವೊ, ಕ್ಷಿಪಣಿಯೊ ಅಥವಾ ಫಿರಂಗಿಯೊ ಎಂದು ತಿಳಿಸಿಲ್ಲ ಮತ್ತು ಅದು ಎಷ್ಟು ದೂರ ಕ್ರಮಿಸಬಲ್ಲದು ಎಂಬ ಬಗ್ಗೆ ವಿವರಗಳನ್ನು ನೀಡಿಲ್ಲ.
ಕೆಲವು ದಿನಗಳ ಹಿಂದಷ್ಟೇ ತನ್ನ ಗಡಿ ಭಾಗದಲ್ಲಿ ದಕ್ಷಿಣ ಕೊರಿಯಾದ ವಿಚಕ್ಷಣ ಡ್ರೋನ್‌ಗಳು ಹಾರಾಟ ನಡೆಸಿದ್ದವು ಎಂದು ಉತ್ತರ ಕೊರಿಯಾ ಆರೋಪಿಸಿತ್ತು. ಅಲ್ಲದೇ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.