ADVERTISEMENT

ಸೇನಾ ಸಂಸ್ಥಾಪನಾ ದಿನ: ಮಗಳೊಂದಿಗೆ ಕಾಣಿಸಿಕೊಂಡ ಸರ್ವಾಧಿಕಾರಿ ಕಿಮ್‌

ಏಜೆನ್ಸೀಸ್
Published 8 ಫೆಬ್ರುವರಿ 2023, 14:10 IST
Last Updated 8 ಫೆಬ್ರುವರಿ 2023, 14:10 IST
ಉತ್ತರ ಕೊರಿಯಾ ಸೇನೆಯ 75ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಆಯೋಜಿಸಿದ್ದ ಔತಣಕೂಟಲ್ಲಿ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್‌ ಅವರು ಪತ್ನಿ ರೀ ಸೋಲ್‌ ಜು ಮತ್ತು ಮಗಳು ಕಿಮ್‌ ಜು ಎ ಅವರೊಂದಿಗೆ ಭಾಗವಹಿಸಿದ್ದರು –ಎಎಫ್‌ಪಿ ಚಿತ್ರ
ಉತ್ತರ ಕೊರಿಯಾ ಸೇನೆಯ 75ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಆಯೋಜಿಸಿದ್ದ ಔತಣಕೂಟಲ್ಲಿ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್‌ ಅವರು ಪತ್ನಿ ರೀ ಸೋಲ್‌ ಜು ಮತ್ತು ಮಗಳು ಕಿಮ್‌ ಜು ಎ ಅವರೊಂದಿಗೆ ಭಾಗವಹಿಸಿದ್ದರು –ಎಎಫ್‌ಪಿ ಚಿತ್ರ   

ಸೋಲ್‌: ಉತ್ತರ ಕೊರಿಯಾ ಸೇನೆಯ 75ನೇ ಸಂಸ್ಥಾಪನಾ ದಿನಕ್ಕೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ತಮ್ಮ 9ರಿಂದ 10 ವರ್ಷದ ಮಗಳು ಕಿಮ್‌ ಜು ಎ ಜತೆ ಭಾಗವಹಿಸಿದ್ದರು ಎಂದು ಸರ್ಕಾರಿ ಮಾಧ್ಯಮವೊಂದು ಬುಧವಾರ ವರದಿ ಮಾಡಿದೆ.

ಇದರೊಂದಿಗೆ, ಕಿಮ್‌ ಜು ಎ ಅವರು ನಾಲ್ಕನೇ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ತಂದೆ ಕಿಮ್‌, ಹಿರಿಯ ಸೇನಾ ಅಧಿಕಾರಿಗಳನ್ನು ಕೈ ಕುಲುಕಿ ಭೇಟಿ ಮಾಡುತ್ತಿದ್ದರೆ, ಮಗಳು ತಂದೆಯ ಕೈ ಹಿಡಿದು ನಿಂತಿದ್ದಳು. ನಂತರ, ಸೇನಾ ಅಧಿಕಾರಿಗಳು, ತಂದೆ ಕಿಮ್‌ ಹಾಗೂ ತಾಯಿ ರೀ ಸೋಲ್‌ ಜು ಅವರೊಂದಿಗೆ ಕುಳಿತು ಊಟ ಮಾಡಿದಳು ಎಂದು ಮಾಧ್ಯಮ ವರದಿ ಮಾಡಿದೆ.

ಉತ್ತರ ಕೊರಿಯಾದಲ್ಲಿ ವಂಶಾಡಳಿತ ಮುಂದುವರೆಲಿದೆ. ಆದ್ದರಿಂದ ಅಣ್ವಸ್ತ್ರಗಳನ್ನು ಸ್ವಯಂ ಪ್ರೇರಿತವಾಗಿ ಒಪ್ಪಿಸುವ ಯಾವುದೇ ಉದ್ದೇಶವಿಲ್ಲ ಎಂಬುದನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಕಿಮ್‌ ಅವರು ತಮ್ಮ ಮಗಳನ್ನು ಕಾರ್ಯಕ್ರಮಗಳಿಗೆ ಕರೆ ತರುತ್ತಿದ್ದಾರೆ ಎಂದು ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ADVERTISEMENT

ಕಿಮ್‌ ಅವರ ಮಗಳನ್ನು ದೇಶದಲ್ಲಿ ಗೌರವಿಸಲಾಗುತ್ತಿದೆ ಹಾಗೂ ಪ್ರೀತಿಯಿಂದ ಕಾಣಲಾಗುತ್ತಿದೆ. ತಂದೆಯ ನಂತರ ಮಗಳೇ ಉತ್ತರಾಧಿಕಾರಿ ಆಗಬಹುದೇನೋ ಎನ್ನುವ ಚರ್ಚೆಯನ್ನು ಇದು ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.