ADVERTISEMENT

ಭಾರತದಿಂದ ಆಗಮಿಸುವವರ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದ ನ್ಯೂಜಿಲೆಂಡ್‌

ಕೋವಿಡ್‌ ಪ್ರಸರಣ ತಡೆಯಲು ಕಠಿಣ ಕ್ರಮ: ಪ್ರಧಾನಿ ಜೆಸಿಂದಾ

ಪಿಟಿಐ
Published 8 ಏಪ್ರಿಲ್ 2021, 7:14 IST
Last Updated 8 ಏಪ್ರಿಲ್ 2021, 7:14 IST
ಜೆಸಿಂಡ ಆರ್ಡರ್ನ್
ಜೆಸಿಂಡ ಆರ್ಡರ್ನ್   

ಮೆಲ್ಬರ್ನ್‌‌/ವೆಲ್ಲಿಂಗ್ಟನ್: ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಆಗಮಿಸುವರ ‍ಪ್ರಯಾಣದ ಮೇಲೆ ನ್ಯೂಜಿಲೆಂಡ್‌ ಎರಡು ವಾರಗಳ ಕಾಲ ನಿರ್ಬಂಧ ಹೇರಿದೆ.

ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಆರ್ಡರ್ನ್ ಅವರು ಗುರುವಾರ ಈ ಆದೇಶವನ್ನು ಹೊರಡಿಸಿದ್ದಾರೆ.

‘ಭಾನುವಾರ (ಏ.11)ರಿಂದ ಏಪ್ರಿಲ್‌ 28ರವರೆಗೆ ಈ ನಿರ್ಬಂಧವಿರಲಿದೆ. ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಭಾರತದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೂ ನ್ಯೂಜಿಲೆಂಡ್‌ ‍ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ’ ಎಂದು ಪ್ರಧಾನಿ ಜೆಸಿಂಡ ಅವರು ಮಾಹಿತಿ ನೀಡಿದರು.

ADVERTISEMENT

‘ನ್ಯೂಜಿಲೆಂಡ್‌ನಲ್ಲಿ ಗುರುವಾರ 23 ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿತರನ್ನು ಪ್ರತ್ಯೇಕವಾಸದಲ್ಲಿ ಇಡಲಾಗಿದೆ. ಆದರೆ ದೃಢಪಟ್ಟ 23 ಸೋಂಕಿತರ ಪೈಕಿ 17 ಮಂದಿ ಭಾರತದಿಂದ ಬಂದವರಾಗಿದ್ದಾರೆ’ ಎಂದು ವರದಿ ಹೇಳಿದೆ.

‘ಇದು ತಾತ್ಕಲಿಕ ಕ್ರಮವಾಗಿದೆ. ಈ ನಿರ್ಬಂಧದಿಂದಾಗಿ ಪ್ರಯಾಣಿಕರೂ ಅಪಾಯದಿಂದ ದೂರ ಇರಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.